ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಜ್‌ ಯಾತ್ರೆ: ಈವರೆಗೆ 98 ಭಾರತೀಯರು ಸಾವು

Published 21 ಜೂನ್ 2024, 12:41 IST
Last Updated 21 ಜೂನ್ 2024, 12:41 IST
ಅಕ್ಷರ ಗಾತ್ರ

ನವದೆಹಲಿ: ವಾರ್ಷಿಕ ಹಜ್‌ ಯಾತ್ರೆಗೆಂದು ಮೆಕ್ಕಾಗೆ ತೆರಳಿದ್ದ 98 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.

ಸಚಿವಾಲಯ ವಕ್ತಾರ ರಣದೀಪ್‌ ಜೈಸ್ವಾಲ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿ 1,75,000 ಭಾರತೀಯರು ಮೆಕ್ಕಾಗೆ ತೆರಳಿದ್ದಾರೆ. ಹಜ್‌ ಯಾತ್ರೆಯು ಮೇ 9 ರಿಂದ ಜುಲೈ 22ರವರೆಗೆ ನಡೆಯಲಿದೆ. ಈ ವರೆಗೆ 98 ಮಂದಿ ಮೃತಪಟ್ಟಿದ್ದಾರೆ. ಹೆಚ್ಚಿನವರು ದೀರ್ಘಕಾಲದ ಕಾಯಿಲೆಯಿಂದ ಹಾಗೂ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ

ಕಳೆದ ವರ್ಷ 187 ಜನ ಮೃತಪಟ್ಟಿದ್ದರು ಎಂದೂ ಅವರು ತಿಳಿಸಿದ್ದಾರೆ.

ಮೆಕ್ಕಾದ ಬೃಹತ್‌ ಮಸೀದಿ ಆವರಣದಲ್ಲಿ ಸರಾಸರಿ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ ಎಂದು ಸೌದಿಯ ಸರ್ಕಾರಿ ಸುದ್ದಿವಾಹಿನಿ ವರದಿ ಮಾಡಿದೆ. ಜಾಗತಿಕ ತಾಪಮಾನದಿಂದ ಸೌದಿ ಅರೇಬಿಯಾದಲ್ಲಿ ತಾಪಮಾನ ತೀವ್ರ ಏರಿಕೆಯಾಗಲಿದೆ ಎಂದು ‘ಟ್ರಾವೆಲ್‌ ಆ್ಯಂಡ್‌ ಮೆಡಿಸಿನ್‌’ ನಿಯತಕಾಲಿಕೆಯು 2024ರಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT