ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಬಿಯಾ ಸ್ಮರಣಾರ್ಥ ಅಂಚೆ ಲಕೋಟೆ

‘ದೇವರ ಮೊಸಳೆ’ಗೆ ಅಂಚೆ ಇಲಾಖೆ ಗೌರವ
Last Updated 19 ನವೆಂಬರ್ 2022, 20:42 IST
ಅಕ್ಷರ ಗಾತ್ರ

ಕಾಸರಗೋಡು: ‘ದೇವರ ಮೊಸಳೆ’ ಎಂದೇ ಹೆಸರಾಗಿದ್ದ ಇಲ್ಲಿನ ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಮೊಸಳೆ ಬಬಿಯಾ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ.

ಈ ಲಕೋಟೆಯಲ್ಲಿ ಅನಂತಪುರದ ಸರೋವರ ದೇವಾಲಯ ಮತ್ತು ಬಬಿಯಾ ಚಿತ್ರಗಳಿವೆ. ಹಿಂಬದಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ದೇವಾಲಯದ ಇತಿಹಾಸ ಮತ್ತು ಬಬಿಯಾ ಜೀವನಚರಿತ್ರೆ ಮುದ್ರಿಸಲಾಗಿದೆ. ಲಕೋಟೆಗೆ ₹10 ದರವಿದೆ.ದ್ದು, ಅಂಚೆ ಫಿಲಾಟಲಿಕ್ ಬ್ಯೂರೊಗಳಲ್ಲಿ ಖರೀದಿಗೆ ಲಭ್ಯವಿದೆ.

ಅನಾವರಣ: ಕುಂಬಳೆ ಅಂಚೆ ಕಚೇರಿಯಲ್ಲಿ ಮಲಬಾರ್ ದೇವಸ್ವ ಬೋರ್ಡ್(ಕೇರಳ ಮಜರಾಯಿ ಇಲಾಖೆ)ಯ ಕಾಸರಗೋಡು ವಿಭಾಗ ಅಧ್ಯಕ್ಷ ಕೊಟ್ಟಾರ ವಾಸುದೇವನ್ ಮತ್ತು ಕಾಸರಗೋಡು ಜಿಲ್ಲಾ ಅಂಚೆ ವರಿಷ್ಠಾಧಿಕಾರಿ ವಿ.ಶಾರದಾ ಅವರು ಈ ಲಕೋಟೆಯನ್ನು ಅನಾವರಣಗೊಳಿಸಿದರು. ಅನಂತಪುರ ದೇವಾಲಯ ಸಮಿತಿ ಅಧ್ಯಕ್ಷ ಉದಯಕುಮಾರ್ ಆರ್. ಗಟ್ಟಿ, ವ್ಯವಸ್ಥಾಪಕ ಲಕ್ಷ್ಮಣ ಹೆಬ್ಬಾರ್, ಗಣೇಶ್ ವಿ., ಡಾ.ಸೋಮೇಶ್ವರ ಗಟ್ಟಿ, ಪ್ರಿಯಾ, ಪಿ.ಆರ್.ಶೀಲಾ, ಪಿ.ಶಾಂತಾ ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT