ಬೆಂಗಳೂರು: ಭಾರತ ಆರ್ಥಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಮನಮೋಹನ ಸಿಂಗ್ ಅವರು ಹುಟ್ಟಿದ್ದು, ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ.
.ತಂದೆಯ ಆಸೆಯಂತೆ ವೈದ್ಯನಾಗಲು ಪ್ರಿ-ಮೆಡಿಕಲ್ ಕೋರ್ಸ್ಗೆ ಸೇರಿದ್ದ ಮನಮೋಹನ್ ಸಿಂಗ್!.
ಪಂಜಾಬ್ನ ಚಕ್ವಾಲ್ ಜಿಲ್ಲೆಯ ಗಾಹ್ ಗ್ರಾಮ ಅವರ ಹುಟ್ಟೂರು. 2004ರಲ್ಲಿ ಅವರು ಮೊದಲ ಬಾರಿ ಪ್ರಧಾನಿಯಾದಾಗ ಇಡೀ ಊರಿನ ಮಂದಿ ಸಂಭ್ರಮಿಸಿದ್ದರು. ಭಾರತದ ಪ್ರಧಾನಿಯ ಪ್ರಮಾಣ ವಚನಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮ ಮನೆ ಮಾಡಿತ್ತು.

2007ರಲ್ಲಿ ಗಾಹ್ ಗ್ರಾಮವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪಂಜಾಬ್ ಸರ್ಕಾರ ಘೋಷಣೆ ಮಾಡಿತು. ಅಲ್ಲಿನ ಶಾಲೆಯೊಂದಕ್ಕೆ ಮನಮೋಹನ ಸಿಂಗ್ ಅವರ ಹೆಸರಿಟ್ಟಿತು. ಪ್ರಾಥಮಿಕ ಶಾಲೆಯೊಂದಕ್ಕೆ ‘ಮನಮೋಹನ ಸಿಂಗ್ ಸರ್ಕಾರಿ ಬಾಲಕರ ಶಾಲೆ’ ಎಂದು ನಾಮಕರಣ ಮಾಡಲಾಯಿತು.
.Manmohan Singh: ಜೀವನ ಹಸನು ಮಾಡಿದ ಸಜ್ಜನ.
ಅಲ್ಲದೆ ಗಾಹ್ಗೆ ಭೇಟಿ ನೀಡಬೇಕು ಎಂದು ಅಲ್ಲಿನ ಗ್ರಾಮಸ್ಥರು ಸಿಂಗ್ ಅವರಿಗೆ ಮನವಿ ಮಾಡಿದ್ದರು ಕೂಡ. ಸಿಂಗ್ ಅವರ ಸಹಪಾಠಿ ಎಂದು ಹೇಳಿಕೊಂಡಿದ್ದ ಗಾಹ್ ಗ್ರಾಮದ ರಾಜ ಮೊಹಮ್ಮದ್ ಅಲಿ ಎಂಬುವವರು ಭಾರತಕ್ಕೆ ಬಂದು ಸಿಂಗ್ ಹಾಗೂ ಕುಟುಂಬದವರನ್ನೂ ಭೇಟಿ ಮಾಡಿದ್ದಾಗಿ ಹೇಳಿದ್ದರು.

ನಾವಿಬ್ಬರು 4ನೇ ತರಗತಿವರೆಗೆ ಒಟ್ಟಿಗೆ ಓದಿದ್ದಾಗಿಯೂ, ಓದಿಗಾಗಿ ಸಿಂಗ್ ಅವರು ಚಕ್ವಾಲ್ಗೆ ಹೋದಾಗಲೂ ಆಗಾಗ್ಗೇ ಭೇಟಿಯಾಗುತ್ತಿದ್ದೆವು ಎಂದು ಅಲಿ ಹೇಳಿದ್ದರು.

(ವಿವಿಧ ಮೂಲಗಳನ್ನು ಆಧರಿಸಿ ಬರೆದ ಸುದ್ದಿ)
.Manmohan Singh | ಕಪ್ಪು ಪಟ್ಟಿ ಧರಿಸಿ ಭಾರತೀಯ ಕ್ರಿಕೆಟಿಗರಿಂದ ಸಿಂಗ್ಗೆ ಗೌರವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.