ಕ್ಷಮೆ ಕೇಳಲೇಬೇಕು: ಸಾಧುಕೋಕಿಲ
ಬೆಂಗಳೂರು: ‘ಕಮಲ್ ಹಾಸನ್‌ಗೆ ಕನ್ನಡಿಗರ ಋಣ ಇದೆ. ಕನ್ನಡದ ಬಗ್ಗೆ ಅವರು ಆಡಿರುವ ಮಾತುಗಳು ಸರಿಯಲ್ಲ. ಅವರು ಕ್ಷಮೆ ಕೇಳಲೇಬೇಕು, ಬೇರೆ ದಾರಿಯಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಹೇಳಿದರು. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಮಲ್ ಸಿನಿಮಾಗಳು ತಮಿಳುನಾಡಿನಲ್ಲಿ ಓಡಲಿಲ್ಲವೆಂದರೂ ಕರ್ನಾಟಕದಲ್ಲಿ ಹಿಟ್ ಆಗುತ್ತಿದ್ದವು. ಅವರ ‘ಗುಣ’ ಚಿತ್ರ ತಮಿಳುನಾಡಿನಲ್ಲಿ ಫ್ಲಾಪ್ ಆಗಿತ್ತು. ಆದರೆ ಇಲ್ಲಿ ಸೂಪರ್ ಹಿಟ್. ಇಲ್ಲಿನ ಪ್ರೇಕ್ಷಕರು ಎಂದಿಗೂ ಅವರನ್ನು ಕೈಬಿಟ್ಟಿಲ್ಲ. ಕನ್ನಡದ ಜನ ಅವರನ್ನು ಪ್ರೀತಿಸಿದ್ದಾರೆ. ಈಗ ಅವರ ಮಾತಿನಿಂದ ಕನ್ನಡಿಗರಿಗೆ ಬೇಸರ ಆಗಿದೆ. ಅವರು ಕ್ಷಮೆ ಕೇಳಲೇ ಬೇಕು’ ಎಂದು ಒತ್ತಾಯಿಸಿದ್ದಾರೆ.