ನವದೆಹಲಿ: ತಮ್ಮ ಕಂಪನಿಯು ಭಾರತದಲ್ಲಿ ತಯಾರಿಸುತ್ತಿರುವ ಮತ್ತೊಂದು ಕೋವಿಡ್ ಲಸಿಕೆ ಕೊವೊವಾಕ್ಸ್ ವಯಸ್ಕರಿಗೆ ಅಕ್ಟೋಬರ್ ವೇಳೆಗೆ ಮತ್ತು ಮಕ್ಕಳಿಗೆ 2022 ರ ಮೊದಲ ತ್ರೈಮಾಸಿಕದ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಹೇಳಿದ್ಧಾರೆ.

ಸೀರಂ ಇನ್‌ಸ್ಟಿಟ್ಯೂಟ್‌ಗೆ ಒದಗಿಸಿದ ಎಲ್ಲಾ ಬೆಂಬಲಕ್ಕಾಗಿ ಅವರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಲಸಿಕೆ ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಅದಾರ್ ಪೂನವಾಲಾ 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

‘ಸರ್ಕಾರವು ನಮಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ ಮತ್ತು ನಾವು ಯಾವುದೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿಲ್ಲ. ಎಲ್ಲಾ ಸಹಕಾರ ಮತ್ತು ಬೆಂಬಲಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞರಾಗಿರುತ್ತೇವೆ’ ಎಂದು ಪೂನಾವಾಲಾ ಪಿಟಿಐಗೆ ತಿಳಿಸಿದರು.

ಮಕ್ಕಳಿಗೆ ಕೋವಿಡ್ ಲಸಿಕೆ ಲಭ್ಯತೆ ಬಗ್ಗೆ ಕೇಳಿದಾಗ, ‘ಕೊವೊವಾಕ್ಸ್ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಹುತೇಕ ಜನವರಿ ಫೆಬ್ರವರಿಯಲ್ಲಿ ಮಕ್ಕಳಿಗೆ ನೀಡಲು ಆರಂಭಿಸಲಾಗುವುದು’ ಎಂದು ಹೇಳಿದರು.

ಡಿಸಿಜಿಐ ಅನುಮೋದನೆಗಳನ್ನು ಅವಲಂಬಿಸಿ ವಯಸ್ಕರಿಗೆ ಕೋವೊವಾಕ್ಸ್ ಅನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಪೂನಾವಾಲಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.