ಬೆಂಗಳೂರು: ಭಾರತೀಯ ವಾಯುಪಡೆಯ ರಫೆಲ್, ಸುಖೋಯ್ 30 ಹಾಗೂ ತೇಜಸ್ ಯುದ್ಧ ವಿಮಾನಗಳ ಸಿಂಹ ಗರ್ಜನೆ, ಎಚ್ಎಎಲ್ ನಿರ್ಮಿಸಿರುವ ವಿವಿಧ ಹೆಲಿಕಾಪ್ಟರ್ಗಳ ರುದ್ರ ನರ್ತನ ಹಾಗೂ ಸೂರ್ಯಕಿರಣ– ಸಾರಂಗ ತಂಡಗಳ ಮನಮೋಹಕ ಪ್ರದರ್ಶನಗಳೊಂದಿಗೆ ’ಏರೊ ಇಂಡಿಯಾ‘ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ಬುಧವಾರ ಭರ್ಜರಿ ಚಾಲನೆ ದೊರಕಿತು.