ನವದೆಹಲಿ: ಕೋವಿಡ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರ ಆಯ್ಕೆಗೆ ಇರುವ ವಯೋಮಿತಿಯನ್ನು ಸಡಿಲಿಸಲಾಗಿದೆ. ಪರಿಷ್ಕರಣೆಯಂತೆ 65 ಅಥವಾ ಅದಕ್ಕೂ ಹೆಚ್ಚಿನ ವಯೋಮಾನದವರು ಅಂಚೆ ಮತಪತ್ರ ಆಯ್ಕೆಗೆ ಅವಕಾಶವಿದೆ.ಈ ಮೊದಲು 80 ವರ್ಷ ಮೇಲ್ಪಟ್ಟವರಿಗೆ ಈ ಅವಕಾಶ ನೀಡಲಾಗಿತ್ತು.

ಕೊರೊನಾ ಬಿಕ್ಕಟ್ಟು ಆರಂಭವಾದ ನಂತರ ದೇಶದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿನ ಮತದಾರರು ಈ ತಿದ್ದುಪಡಿಯ ಅನುಕೂಲ ಪಡೆಯಲಿದ್ದಾರೆ. ಕಾನೂನು ಸಚಿವಾಲಯ ಚುನಾವಣಾ ನಿಯಮಗಳಿಗೆ ಈ ಸಂಬಂಧ ತಿದ್ದುಪಡಿ ತಂದಿದೆ.

65 ಅಥವಾ ಅದಕ್ಕೂ ಮೀರಿದ ವಯಸ್ಸಿನವರಿಗೆ ಕೊರೊನಾ ಬಾಧಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ. ಚುನಾವಣಾ ಆಯೋಗದ ಸಲಹೆ ಆಧರಿಸಿ ‘ಕೋವಿಡ್–19 ಶಂಕಿತರು ಮತ್ತು ಪೀಡಿತರಿಗೂ’ ಅಂಚೆ ಮತ ಪತ್ರ ಆಯ್ಕೆಯ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.