ನವದೆಹಲಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿಯು (ಎಎಐಬಿ) ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಜೂನ್ 13ರಂದು ಸಂಭವಿಸಿದ್ದ ಅಪಘಾತದಲ್ಲಿ ಏರ್ ಇಂಡಿಯಾದ ಬೋಯಿಂಗ್ 787–8 ಡ್ರೀಮ್ಲೈನರ್ ವಿಮಾನದಲ್ಲಿದ್ದ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಮತ್ತು ವಿಮಾನ ಅಪ್ಪಳಿಸಿದ್ದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಸಂಕೀರ್ಣದಲ್ಲಿದ್ದ 34 ಜನರು ಅಸುನೀಗಿದ್ದರು. ಅವಶೇಷಗಳ ನಡುವೆ ಜೂನ್ 16ರಂದು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿತ್ತು.

ಅಂತರರಾಷ್ಟ್ರೀಯ ಶಿಷ್ಟಾಚಾರದಂತೆ ವಿಮಾನ ಅಪಘಾತ ತನಿಖಾ ಮಂಡಳಿಯು ಪ್ರಧಾನ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಇದರಲ್ಲಿ ವೈಮಾನಿಕ ಔಷಧ ತಜ್ಞ, ಎಟಿಸಿ ಅಧಿಕಾರಿ, ರಾಷ್ಟ್ರೀಯ ಸಂಚಾರ ಸುರಕ್ಷತಾ ಮಂಡಳಿ (ಎನ್ಟಿಎಸ್ಬಿ) ಸದಸ್ಯರಿದ್ದಾರೆ.
.ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ಬಾಕ್ಸ್ಗಳನ್ನು AAIB ಪರಿಶೀಲಿಸುತ್ತಿದೆ: ನಾಯ್ಡು.ಸಂಪಾದಕೀಯ | ಏರ್ ಇಂಡಿಯಾ ವಿಮಾನ ದುರಂತ; ಕಾರಣ ಪತ್ತೆ ಈ ಹೊತ್ತಿನ ಆದ್ಯತೆ.ಭೀಕರ ದುರಂತದ ಬೆನ್ನಲ್ಲೇ ವಿಮಾನ ಸಂಖ್ಯೆ ‘171’ ಬಳಸದಿರಲು ಏರ್ ಇಂಡಿಯಾ ನಿರ್ಧಾರ.ಜು.15ರವರೆಗೆ ಸಣ್ಣ ಗಾತ್ರದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.