ನವದೆಹಲಿ: ಹೀಥ್ರೂ–ಬೆಂಗಳೂರು ಬೋಯಿಂಗ್–787 ವಿಮಾನದ ಇಂಧನ ಪೂರೈಕೆ ಸ್ವಿಚ್ಗಳಲ್ಲಿ ಸಮಸ್ಯೆ ಕಂಡುಬಂದ ಕಾರಣದಿಂದಾಗಿ ಏರ್ ಇಂಡಿಯಾ ಸಂಸ್ಥೆಯು ತನ್ನ 33 ವಿಮಾನಗಳಲ್ಲಿನ ಇಂತಹ ಸ್ವಿಚ್ಗಳನ್ನು ಪರಿಶೀಲಿಸಲು ಮುಂದಾಗಿದೆ. ಸಂಸ್ಥೆಯ ಆಂತರಿಕ ಮೂಲಗಳು ಎಎಫ್ಪಿಗೆ ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿವೆ.

ಬೋಯಿಂಗ್ 787–8 ಡ್ರೀಮ್ಲೈನರ್ ವಿಮಾನದಲ್ಲಿ ಸೋಮವಾರ ಸಮಸ್ಯೆ ವರದಿಯಾಗುತ್ತಿದ್ದಂತೆಯೇ ಆದ್ಯತೆಯ ಮೇರೆಗೆ ಈ ಸಮಸ್ಯೆ ಪರಿಹರಿಸಲು ಸಂಸ್ಥೆ ನಿರ್ಧರಿಸಿದೆ. ಹೀಗಾಗಿ ಸಂಚಾರಕ್ಕೆ ಬಳಸಲಾಗುತ್ತಿರುವ ತನ್ನ ಎಲ್ಲಾ ವಿಮಾನಗಳನ್ನೂ ಪರಿಶೀಲನೆಗೆ ಒಳಪಡಿಸಿದೆ. ಈಗಾಗಲೇ ಹಲವು ವಿಮಾನಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

ಇಂಧನ ಸ್ವಿಚ್ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ಬೋಯಿಂಗ್ ನೀಡಿಲ್ಲ. ಅಹಮದಾಬಾದ್ನಲ್ಲಿ 260 ಮಂದಿಯನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ಭಾರತದ ಆಡಳಿತಾಧಿಕಾರಿಗಳು ತನಿಖೆ ನಡೆಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.