ನವದೆಹಲಿ: ಪ್ರಯಾಣಿಕರಿಗೆ ಅವಧಿ ಮೀರಿದ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಿದೆ ಎಂದು ಆಕಾಶ ಏರ್‌ನ ಪ್ರಯಾಣಿಕರೊಬ್ಬರು ದೂರಿದ್ದು, ಈ ಕುರಿತು ವಿವರವಾದ ತನಿಖೆ ನಡೆಸುವುದಾಗಿ ವಿಮಾನ ಸಂಸ್ಥೆ ತಿಳಿಸಿದೆ.
ಗೋರಖ್– ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.