ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಎಲ್ಲಾ ಸಬ್ ರಿಜಿಸ್ಟ್ರಾರ್‌ ಸ್ಥಾನಕ್ಕೆ ಮಹಿಳೆಯರು: ಲೆ. ಗವರ್ನರ್‌ ಸೂಚನೆ

Last Updated 13 ಡಿಸೆಂಬರ್ 2022, 10:40 IST
ಅಕ್ಷರ ಗಾತ್ರ

ನವದೆಹಲಿ: ಆಸ್ತಿ ನೋಂದಣಿಯಿಂದ ಆರಂಭವಾಗಿ, ಮದುವೆ ನೋಂದಣಿಯವರೆಗೆ ದೆಹಲಿಯಲ್ಲಿ ಇನ್ನು ಮುಂದೆ ಎಲ್ಲಾ ಸಬ್-ರಿಜಿಸ್ಟ್ರಾರ್‌ ಹುದ್ದೆಗಳಲ್ಲೂ ಮಹಿಳೆಯರೇ ಇರಲಿದ್ದಾರೆ. ಮಹಿಳೆಯರನ್ನಷ್ಟೇ ನೇಮಕ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.

ಈ ಕ್ರಮದಿಂದಾಗಿ ದೆಹಲಿ ಸರ್ಕಾರದ ಕಂದಾಯ ಇಲಾಖೆಯಲ್ಲಿರುವ ಎಲ್ಲಾ 22 ಸಬ್-ರಿಜಿಸ್ಟ್ರಾರ್‌ ಸ್ಥಾನಗಳಿಗೂ (ಎಸ್‌ಆರ್‌ಗಳು) ಮಹಿಳಾ ಅಧಿಕಾರಿಗಳು ನೇಮಕವಾಗಲಿದ್ದಾರೆ.

ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ, ಪಕ್ಷಪಾತ ಮತ್ತು ಜನರಿಗೆ ಕಿರುಕುಳ ತಪ್ಪಿಸಲು ಮಹಿಳಾ ಅಧಿಕಾರಿಗಳ ನೇಮಕ ನೆರವಾಗಲಿದೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಬ್‌ ರಿಜಿಸ್ಟ್ರಾರ್‌ಗಳೆಂದರೆ ಸರ್ಕಾರಿ ಕಚೇರಿಗಳು ಮತ್ತು ಸಾಮಾನ್ಯ ಜನರ ನಡುವಿನ ಸಂ‍ಪರ್ಕ ಕೊಂಡಿ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT