ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸ ಸಮೀಪ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬಾರಿ ಬೆಲೆಯ ಬೈಕ್ ಅನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ವಶಪಡಿಸಿಕೊಂಡಿದೆ.

ಈ ಬೈಕ್, ಪ್ರಕರಣದ ಆರೋಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಸಹವರ್ತಿ ಎಂದು ಹೇಳಲಾದ ಮಹಿಳೆಯ ಹೆಸರಲ್ಲಿದೆ. ಎನ್‌ಐಎ ಶುಕ್ರವಾರ ಮಹಿಳೆಯ ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಐಎ ಅಧಿಕಾರಿಗಳು ಸೋಮವಾರ ಆ ಬೈಕ್‌ನ್ನು ಟೆಂಪೊದಲ್ಲಿ ದಕ್ಷಿಣ ಮುಂಬೈನ ತಮ್ಮ ಕಚೇರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಮಹಿಳೆ ವಾಸವಿದ್ದ ಮುಂಬೈ ಮೀರಾ ರಸ್ತೆಯಲ್ಲಿರುವ ಫ್ಲ್ಯಾಟ್ ಅನ್ನು ಗುರುವಾರ ಎನ್‌ಐಎ ತಂಡ ಪರಿಶೀಲಿಸಿದೆ. ಮುಕೇಶ್ ಅಂಬಾನಿ ನಿವಾಸ 'ಆಂಟಿಲಿಯಾ' ಬಳಿ ಸ್ಫೋಟಕಗಳು ತುಂಬಿದ ವಾಹನ ಪತ್ತೆಯಾಗುವ ಮುನ್ನ ಫೆಬ್ರವರಿ 16 ರಂದು ಇದೇ ಮಹಿಳೆ ವಾಜೆಯವರೊಂದಿಗೆ ನಗರದಲ್ಲಿರುವ ಹೋಟೆಲ್‌ಗೆ ತೆರಳಿದ್ದರು ಎಂದು ಎನ್‌ಐಎ ಶಂಕಿಸಿರುವುದಾಗಿ ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆ ಬಳಸುತ್ತಿದ್ದ ಎಂಟು ದುಬಾರಿ ಬೆಲೆಯ ವಾಹನಗಳನ್ನು ಎನ್‌ಐಎ ತಂಡ ವಶಪಡಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.