ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಮಧ್ಯೆಯೇ ಅಮರನಾಥ ಯಾತ್ರೆ ಕೈಗೊಂಡ 5,600 ಯಾತ್ರಿಕರು

Published 4 ಜುಲೈ 2024, 15:08 IST
Last Updated 4 ಜುಲೈ 2024, 15:08 IST
ಅಕ್ಷರ ಗಾತ್ರ

ಜಮ್ಮು: ಭಾರಿ ಮಳೆಯ ನಡುವೆಯೇ, 5,600 ಯಾತ್ರಾರ್ಥಿಗಳ ತಂಡವು ಜಮ್ಮುವಿನ ಭಗವತಿನಗರ ಮೂಲ ಶಿಬಿರದಿಂದ ಅಮರನಾಥದ ಎರಡು ಮೂಲಶಿಬಿರಗಳಾದ ಬಾಲ್‌ಟಾಲ್‌ ಮತ್ತು ಪಹಲ್ಗಾಮ್‌ ಗುರುವಾರ ಪ್ರಯಾಣ ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದು ಏಳನೇ ತಂಡವಾಗಿದ್ದು, 4,487 ಪುರುಷರು, 1,011 ಮಹಿಳೆಯರು, 10 ಮಕ್ಕಳು ಮತ್ತು 188 ಸಾಧುಗಳು ಮತ್ತು ಸಾಧ್ವಿಯರು 219 ವಾಹನಗಳಲ್ಲಿ ಜಮ್ಮುವಿನಿಂದ ಬೆಳಿಗ್ಗೆ 3.13ಕ್ಕೆ ಹೊರಟರು. ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಅವರಿಗೆ ಭದ್ರತೆ ಒದಗಿಸಿದರು. ಇವರಲ್ಲಿ 3,668 ಯಾತ್ರಿಗಳು 48 ಕಿ.ಮೀ ಅಂತರದ ಪಹಲ್ಗಾಮ್‌ ಹಾದಿಯನ್ನು ಆಯ್ಕೆ ಮಾಡಿಕೊಂಡರೆ, 2,028 ಯಾತ್ರಿಕರು ಕಡಿದಾದ ಬಾಲ್‌ಟಾಲ್‌ ಹಾದಿಯನ್ನು ಆಯ್ಕೆ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.

ಬುಧವಾರ ಒಂದೇದಿನ 30 ಸಾವಿರಕ್ಕೂ ಹೆಚ್ಚು ಯಾತ್ರಿಗಳು ಅಮರನಾಥ ದರ್ಶನ ಪಡೆದಿದ್ದಾರೆ. ಈ ವರೆಗೆ 1 ಲಕ್ಷಕ್ಕೂ ಹೆಚ್ಚು ಜನರು ದರ್ಶನ ಪಡೆದಂತಾಗಿದೆ ಎಂದು ಅವರು ಹೇಳಿದ್ದಾರೆ.

ಯಾತ್ರೆಯು ಆಗಸ್ಟ್‌ 19ರಂದು ಮುಕ್ತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT