ಕೋಲ್ಕತ್ತ: ರಾಜಕೀಯ ಹಿಂಸೆ, ಭ್ರಷ್ಟಾಚಾರ, ಸುಲಿಗೆ ಮತ್ತು ಬಾಂಗ್ಲಾದೇಶೀಯರ ಒಳ ನುಸುಳುವಿಕೆ ತೊಡೆದುಹಾಕಲು ಪಶ್ಚಿಮ ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಬೋಲ್‌ಪುರದಲ್ಲಿ ರೋಡ್ ಶೋದಲ್ಲಿ ಮಾತನಾಡಿದ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಂಗಾಳದ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿ ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಪಟ್ಟಣವಿದು. ಹಿಂದೆ ‘ಸೋನರ್ ಬಾಂಗ್ಲಾ (ಬೆಂಗಾಲ್ ಆಫ್ ಗೋಲ್ಡ್)’ ಎಂದು ಕರೆಯುತ್ತಿದ್ದ ಇಲ್ಲಿನ ವೈಭವವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮರಳಿ ರೂಪಿಸಲಿದೆ ಎಂದು ಶಾ ಹೇಳಿದ್ದಾರೆ.

ಇದನ್ನೂ ಓದಿ:ರವೀಂದ್ರನಾಥ ಟ್ಯಾಗೋರ್ಗೆ ಗೌರವ ಅರ್ಪಿಸಿದ ಅಮಿತ್ ಶಾ

‘ನನ್ನ ಜೀವನದಲ್ಲಿ ನಾನು ಹಲವಾರು ರೋಡ್ ಶೋಗಳಿಗೆ ಹಾಜರಾಗಿದ್ದೇನೆ ಮತ್ತು ಆಯೋಜಿಸಿದ್ದೇನೆ ಆದರೆ ಈ ರೀತಿಯದ್ದನ್ನು ನೋಡಿಲ್ಲ. ಈ ರೋಡ್ ಶೋ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಜನರ ಆಕ್ರೋಶದ ಪ್ರತಿಫಲನವಾಗಿದೆ. ಇಲ್ಲಿ ಸೇರಿರುವ ಜನಸ್ತೋಮವು ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾದ ಮೇಲೆ ಜನರ ನಂಬಿಕೆಯನ್ನು ತೋರಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.