ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ್ ಅಂಬಾನಿ– ರಾಧಿಕಾ: ಐಷಾರಾಮಿ ಹಡಗಿನಲ್ಲಿ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮ

Published 21 ಮೇ 2024, 5:25 IST
Last Updated 21 ಮೇ 2024, 5:25 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ–ರಾಧಿಕಾ ಮರ್ಚೆಂಟ್ ಅವರ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ಇತ್ತೀಚೆಗೆ ನಡೆದ ಮೊದಲ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಜುಕರ್‌ಬರ್ಗ್, ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ಪಾಪ್ ತಾರೆ ರಿಹನ್ನಾ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಮುಂತಾದ 1,200 ಅತಿಥಿಗಳು ಭಾಗವಹಿಸಿದ್ದರು.

ಇದೇ 28ರಿಂದ 30ರವರೆಗೆ ಮತ್ತೊಂದು ವಿವಾಹಪೂರ್ವ ಕಾರ್ಯಕ್ರಮ ನಡೆಯಲಿದ್ದು, ಐಷಾರಾಮಿ ಹಡಗಿನಲ್ಲಿ 800 ಮಂದಿ ಅತಿಥಿಗಳಿಗೆ ಆತಿಥ್ಯ ನೀಡಲಿದ್ದಾರೆ. ಈ ಹಡಗು ಇಟಲಿಯಿಂದ ದಕ್ಷಿಣ ಫ್ರಾನ್ಸ್‌ವರೆಗೆ 3 ದಿನಗಳವರೆಗೆ 4380 ಕಿ.ಮೀ ಸಾಗಲಿದೆ.

ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಹ ಇದ್ದಾರೆ. 800 ಅತಿಥಿಗಳನ್ನು ಹೊರತುಪಡಿಸಿ, 600 ಮಂದಿ ಆತಿಥ್ಯ ಸಿಬ್ಬಂದಿ ಸಹ ಉಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ.

ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಇದೇ ಜುಲೈನಲ್ಲಿ ವರಿಸಲಿದ್ದಾರೆ. ಮದುವೆ ಲಂಡನ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2023ರ ಜನವರಿ 19ರಂದು ಈ ಜೋಡಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ರಾಧಿಕಾ ಮರ್ಚಂಟ್ ಅವರು ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್‌ ಲಿಮಿಟೆಡ್ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT