ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯಗೆ ಭಾರತ ರತ್ನ ನೀಡಲು ಆಂಧ್ರ ಸಿಎಂ ಮನವಿ

Last Updated 13 ಮಾರ್ಚ್ 2021, 8:33 IST
ಅಕ್ಷರ ಗಾತ್ರ

ಅಮರಾವತಿ: ರಾಷ್ಟ್ರಧ್ವಜ ವಿನ್ಯಾಸ ಮಾಡಿದ್ದ ದಿವಂಗತ ಪಿಂಗಳಿ ವೆಂಕಯ್ಯ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ನಡೆಯುವ ‘ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಅವರುಚಾಲನೆ ನೀಡಿದರು.ಆಂಧ್ರದಲ್ಲಿ 75 ವಾರಗಳ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ ಪಿಂಗಳಿ ವೆಂಕಯ್ಯ ಅವರ ಪುತ್ರಿ ಘಂಟಸಾಲ ಸೀತಾಮಹಾಲಕ್ಷ್ಮೀ ಅವರನ್ನು ಸನ್ಮಾನಿಸಿ, ಅವರಿಗೆ ₹ 75 ಲಕ್ಷ ರೂಪಾಯಿ ನೀಡಿದರು. ಪಿಂಗಳಿ ವೆಂಕಯ್ಯ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

1921ರ ಏಪ್ರಿಲ್ 1ರಂದು ಮಹಾತ್ಮಾ ಗಾಂಧಿ ವಿಜಯವಾಡ ನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಿಂಗಳಿ ವೆಂಕಯ್ಯ ತಾವು ವಿನ್ಯಾಸ ಮಾಡಿದ್ದ ಧ್ವಜವನ್ನು ಗಾಂಧೀಜಿಗೆ ನೀಡಿದ್ದರು.

1947ರ ಜುಲೈ 22ರಂದು ನಡೆದ ಸಂವಿಧಾನ ಸಭೆಯು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT