ಅಮರಾವತಿ: ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆಯಲ್ಲಿ ಟ್ರಾನ್ಸ್ಮೀಡಿಯಾ ಮನರಂಜನಾ ನಗರ 'ಕ್ರಿಯೇಟರ್ಲ್ಯಾಂಡ್' ಸ್ಥಾಪಿಸುವ ಒಪ್ಪಂದಕ್ಕೆ ಆಂಧ್ರಪ್ರದೇಶ ಸರ್ಕಾರ ಸಹಿ ಹಾಕಿದೆ.

ಈ ಯೋಜನೆಯಡಿ ಥೀಮ್ ಪಾರ್ಕ್ಗಳು, ಗೇಮಿಂಗ್ ವಲಯಗಳು ಮತ್ತು ಜಾಗತಿಕ ಸಿನಿಮಾ ಸಹ-ನಿರ್ಮಾಣ ವಲಯಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಈ ಯೋಜನೆ ಮೂಲಕ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಡಿಜಿಟಲ್ ಆಧುನಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಸರ್ಕಾರವು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಟ್ರಾನ್ಸ್ಮೀಡಿಯಾ ನಗರ 'ಕ್ರಿಯೇಟರ್ಲ್ಯಾಂಡ್' ನಿರ್ಮಿಸಲು ₹10,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ.
.ಇಂದಿರಾ ಗಾಂಧಿ ರೀತಿ ಪಾಕಿಸ್ತಾನವನ್ನು ಎದುರಿಸಿ: ಕೇಂದ್ರಕ್ಕೆ ಖಂಡ್ರೆ ಒತ್ತಾಯ.ಆಫ್ರಿಕಾ ದೇಶ ಅಂಗೋಲಾ ಸೇನೆಯ ಆಧುನೀಕರಣಕ್ಕೆ ₹ 1,690 ಕೋಟಿ ಘೋಷಿಸಿದ ಪಿಎಂ ಮೋದಿ.
ಕ್ರಿಯೇಟಿವ್ಲ್ಯಾಂಡ್ ಏಷ್ಯಾ ಜತೆಗಿನ ಪಾಲುದಾರಿಕೆಯು ಚಲನಚಿತ್ರ ಮತ್ತು ಮನರಂಜನಾ ಸೇರಿದಂತೆ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಕಲ್ಪಿಸುವ ಒಪ್ಪಂದವಾಗಿದೆ. ಇದು ಪ್ರತಿಭೆ, ನಾವೀನ್ಯತೆ ಮತ್ತು ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಕೆ. ದುರ್ಗೇಶ್ ತಿಳಿಸಿದ್ದಾರೆ.

ಈ ಮನರಂಜನಾ ಕೇಂದ್ರವು ಆಂಧ್ರಪ್ರದೇಶ ಸೇರಿದಂತೆ ದೇಶದ ಯುವಕರಿಗೆ ಸೃಜನಶೀಲ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ದುರ್ಗೇಶ್ ಹೇಳಿದ್ದಾರೆ.

ಮೇ 1ರಿಂದ ನಡೆಯುತ್ತಿರುವ ವೇವ್ಸ್ ಶೃಂಗಸಭೆಯನ್ನು (WAVES) ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿ ಉದ್ಘಾಟಿಸಿದರು. ಮೇ 4ರವರೆಗೆ ವೇವ್ಸ್ ಶೃಂಗಸಭೆ ನಡೆಯಲಿದೆ.
.ಪಾಕಿಸ್ತಾನ ಧ್ವಜವಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ಪ್ರವೇಶ ನಿಷಿದ್ಧ: ಕೇಂದ್ರ.ಜಾತಿಗಣತಿ ವಿಷಯದಲ್ಲಿ ಕಾಂಗ್ರೆಸ್ ತೋರಿದ್ದ ನಿಲುವು ಎಂಥಹದ್ದು?; ಮಾಯಾವತಿ ಕಿಡಿ.India - Pak Tensions: ಪಾಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ.ವಡೋದರಾ ಎಕ್ಸ್ಪ್ರೆಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1,283 KG ಗೋಮಾಂಸ ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.