ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ: ಪೆಟ್ರೋಲ್‌ ಬಾಂಬ್‌, ಕಚ್ಛಾ ಶಸ್ತ್ರಾಸ್ತ್ರಗಳು ಪೊಲೀಸ್‌ ವಶಕ್ಕೆ

Published 16 ಮೇ 2024, 16:17 IST
Last Updated 16 ಮೇ 2024, 16:17 IST
ಅಕ್ಷರ ಗಾತ್ರ

ಆಂಧ್ರಪ್ರದೇಶ: ಮತದಾನದ ವೇಳೆ ಹಿಂಸಾಚಾರ ನಡೆದಿದ್ದ, ಆಂಧ್ರಪ್ರದೇಶದ ಪಿನ್ನೆಲಿ ಗ್ರಾಮದಲ್ಲಿ 50 ಪೆಟ್ರೋಲ್‌ ಬಾಂಬ್, ಕಲ್ಲುಗಳು, ಕುಡುಗೋಲುಗಳು ಮತ್ತು ಮದ್ಯದ ಒಡೆದಿರುವ ಸೀಸೆಗಳು ತುಂಬಿದ್ದ ಎರಡು ಚೀಲಗಳನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ.

‘ಗ್ರಾಮದ ಎರಡು ಮನೆಗಳಿಂದ ಕಚ್ಚಾ ಮತ್ತು ದೇಶಿಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಬಿಂದು ಮಾಧವ್‌ ಗರಿಕಾಪತಿ ಅವರು ತಿಳಿಸಿದ್ದಾರೆ.

‘ಉದ್ವಿಗ್ನ ಪರಿಸ್ಥಿತಿಯಿರುವ ಗ್ರಾಮದಲ್ಲಿ ಮುಂಜಾಗ್ರತ ಕ್ರಮವಾಗಿ ಪ್ರತಿಯೊಂದು ಮನೆಯಲ್ಲಿ ಪರಿಶೀಲನೆ ನಡೆಸುವುದು ಉತ್ತಮ ಎಂದು ಭಾವಿಸಿ ಕಾರ್ಯಾಚರಣೆ ನಡೆಸಲಾಯಿತು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT