ಕುಂಬುಂ: ಚಿಕ್ಕಮ್ಮನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಮಗನ ಅಸಭ್ಯ ವರ್ತನೆಯಿಂದ ಬೇಸತ್ತ ತಾಯಿ ಆತನನ್ನು ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿ ಕೆ. ಲಕ್ಷ್ಮೀದೇವಿ (57) ಅವರು ತಮ್ಮ ಮಗ ಕೆ. ಶ್ಯಾಮ್ ಪ್ರಸಾದ್ ಅವರನ್ನು ಫೆ.13ರಂದು ಕೊಲೆ ಮಾಡಿದ್ದಾರೆ. ಲಕ್ಷ್ಮೀ ಅವರ ಸಂಬಂಧಿಕರು ಈ ಕೊಲೆ ಮಾಡಲು ಸಹಾಯ ಮಾಡಿದ್ದಾರೆ ಎಂದು ಪ್ರಕಾಶಂ ಎಸ್ಪಿ ಎ.ಆರ್ ದಾಮೋದರ್ ತಿಳಿಸಿದರು.

ಅವಿವಾಹಿತನಾಗಿದ್ದ ಶ್ಯಾಮ್, ಬೆಂಗಳೂರು, ಖಮ್ಮಂ ಮತ್ತು ಹೈದರಾಬಾದ್ನಲ್ಲಿರುವ ತನ್ನ ಸಂಬಂಧಿಗಳು ಹಾಗೂ ಚಿಕ್ಕಮ್ಮನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅವರ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಇದನ್ನು ಸಹಿಸಲಾರದೆ ಲಕ್ಷ್ಮೀ ಆತನನ್ನು ಹತ್ಯೆ ಮಾಡಿದ್ದಾರೆ ಎಂದರು.

ಹರಿತವಾದ ವಸ್ತುವಿನಿಂದ ಶ್ಯಾಮ್ನನ್ನು ಹತ್ಯೆ ಮಾಡಿ, ಬಳಿಕ ಆತನ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಲಾಗಿದೆ. ನಂತರ ಆ ಚೀಲಗಳನ್ನು ನಾಕಲಗಂಡಿಯ ಕುಂಬುಂ ಗ್ರಾಮದ ಕಾಲುವೆಯಲ್ಲಿ ಎಸೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.