ಆಂಧ್ರಪ್ರದೇಶ:ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವುದು ಖಚಿತವಾದ ಹಿನ್ನೆಲೆಯಲ್ಲಿ ಚಂದ್ರಬಾಬುನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಸಂಜೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಅಧಿಕೃತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಇತ್ತ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಸಿಎಂ ಸ್ಥಾನಕ್ಕೇರಲು ಸಿದ್ಧತೆ ನಡೆದಿದೆ.ವೈಎಸ್ ಆರ್ ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದರೆ, ಇದರಸಂಪ್ರದಾಯಿಕ ಎದುರಾಳಿ ತೆಲುಗು ದೇಶಂ ಪಾರ್ಟಿ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶದಲ್ಲಿ ಅಚ್ಚರಿಯ ಫಲಿತಾಂಶ ಕಂಡು ಬಂದಿದೆ.ಇದು ಚಂದ್ರಬಾಬುನಾಯ್ಡು ಅವರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ತನ್ನ ಅಭೂತಪೂರ್ವ ಜಯ ಸಾಧಿಸಲುಹಲವು ಕಾರಣಗಳಿವೆ.ಕಳೆದ ಐದು ವರ್ಷಗಳಿಂದ ಸತತವಾಗಿ ರಾಜ್ಯದ ಜನರ ಒಡನಾಟದಲ್ಲಿದ್ದದ್ದೂ ಕೂಡ ವೈಎಸ್ ಆರ್ ಕಾಂಗ್ರೆಸ್ ವೈ.ಎಸ್. ಜಗನ್ ಮೋಹನ್ ರೆಡ್ಡಿ ಬಹುಮತ ಇಷ್ಟೊಂದು ಪ್ರಮಾಣದಲ್ಲಿ ಗೆಲುವು ಸಾಧಿಸಲು ಕಾರಣ ಎನ್ನಲಾಗಿದೆ. ಚಂದ್ರಬಾಬು ನಾಯ್ಡುಬಿಜೆಪಿಗೆ ಬೆಂಬಲ ನೀಡಿ ವಾಪಸ್ ತೆಗೆದುಕೊಂಡ ಚಂದ್ರಬಾಬು ನಾಯ್ಡು ಅವರ ನಡೆ ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಂಧ್ರಪ್ರದೇಶದಲ್ಲಿ ದಲಿತರು, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯವನ್ನು ಸಮಾನ ದೃಷ್ಟಿಯಲ್ಲಿ ನೋಡಿದ್ದು ವೈಎಸ್ ಜಗನ್ ಮೋಹನ್ ರೆಡ್ಡಿ ಪಕ್ಷಕ್ಕೆ ಮತಗಳು ಹರಿದು ಬರಲುಕಾರಣ ಎನ್ನಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಕ್ರಮಗಳ ಆರೋಪಗಳು ಕೇಳಿಬಂದಿದ್ದು ಕೂಡ ಜನರಲ್ಲಿ ನಾಯ್ಡು ಬಗ್ಗೆ ಅಸಮಾಧಾನ ಉಂಟಾಗಲು ಕಾರಣ ಎನ್ನಲಾಗಿದೆ.

ಚಂದ್ರಬಾಬುನಾಯ್ಡು ಎನ್ ಡಿಎಗೆ ಬೆಂಬಲ ವಾಪಸ್ ತೆಗೆದುಕೊಂಡ ಬಳಿಕ, ವೈಎಸ್‌ಆರ್ ಜಗನ್ ಮೋಹನ್ ರೆಡ್ಡಿ ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶದಲ್ಲೂ ಅಭಿವೃದ್ದಿಯಾಗಬಹುದು ಎಂಬುದು ಕೂಡ ಇಲ್ಲಿನ ಮತದಾರನ ನಿರೀಕ್ಷೆಗಳಲ್ಲಿ ಒಂದಾಗಿದೆ.

ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವೈಎಸ್ ರಾಜಶೇಖರ ರೆಡ್ಡಿಯವರಂತೆ ಜನಪ್ರಿಯ ಮುಖ್ಯಮಂತ್ರಿಯಾಗುತ್ತಾರಾ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.