ಚಂಡೀಗಢ (ಪಿಟಿಐ): ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಹಾಗೂ ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್ಪಾಲ್ ಸಿಂಗ್ ತನ್ನ ಸಹಚರ ಪಪಲ್ಪ್ರೀತ್ ಸಿಂಗ್ನೊಂದಿಗೆ ಇರುವ ಮತ್ತೊಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ಹರಿದಾಡುತ್ತಿದೆ.

ಪೊಲೀಸ್ ಕಾರ್ಯಾಚರಣೆ ಆರಂಭಿಸಿದ ಮರುದಿನ ತೆಗೆದ ಫೋಟೊ ಇದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದಲ್ಲಿ ಅಮೃತ್ಪಾಲ್ ಸಿಂಗ್ ಜಾಕೆಟ್, ಕಂದು ಕೆಂಪು ಬಣ್ಣದ ಟರ್ಬನ್ ಮತ್ತು ಸನ್ಗ್ಲಾಸ್ ಧರಿಸಿದ್ದಾನೆ. ಪಾನೀಯದ ಬಾಟಲಿಯನ್ನು ಹಿಡಿದುಕೊಂಡಿದ್ದಾನೆ. ಸಹಚರ ಪಕ್ಕದಲ್ಲಿ ಕುಳಿತಿದ್ದಾನೆ.

ಪಪಲ್ಪ್ರೀತ್ ಸಿಂಗ್, ಅಮೃತ್ ಪಾಲ್ ಮಾರ್ಗದರ್ಶಕ ಎಂದು ಹೇಳಲಾಗುತ್ತದೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಇದೆ.

ಸಹಚರನ ಬಂಧನ:

ಈ ಮಧ್ಯೆ ಇನ್ನೊಬ್ಬ ಸಹಚರ ವರಿಂದರ್ ಸಿಂಗ್ ಅಲಿಯಾಸ್ ಫೌಝಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿಯಲ್ಲಿ ಅಮೃತಸರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಅಸ್ಸಾಂನ ದಿಬ್ರುಗಢ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಮತ್ತು ಇತರ ಸದಸ್ಯರು ತಲೆಮರೆಸಿಕೊಂಡಿದ್ದು, ಮಾ.18ರಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸಿಖ್ ಮೂಲಭೂತವಾದಿ ಅಮೃತಪಾಲ್ ಸಿಂಗ್ ನೇಪಾಳದಲ್ಲಿ ಅಡಗಿರುವ ಶಂಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.