ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸಿನ್ ಭಟ್ಕಳ್ ಬಂಧನ ಮಾಹಿತಿ ಬಹಿರಂಗ ಪಡಿಸಿದ್ದರೇ ಲೋಕನಾಥ್ ಬೆಹರಾ? 

Last Updated 4 ಡಿಸೆಂಬರ್ 2018, 4:39 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಸಂಘಟನೆಯ ಯಾಸಿನ್ ಭಟ್ಕಳ್ ಬಂಧನಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸಿದ್ದಕ್ಕಾಗಿ ಡಿಜಿಪಿ ಲೋಕನಾಥ್ ಬೆಹರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ತೆಗೆದುಹಾಕಲಾಗಿತ್ತು ಎಂದ ಗೃಹ ಸಚಿವಾಲಯದ ಮೂಲಗಳು ಹೇಳಿರವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ಮಾಹಿತಿ ಬಹಿರಂಗ ಪಡಿಸಿದ್ದ ಆ ರಾತ್ರಿಯೇ ಬೆಹರಾ ಅವರನ್ನು ಪ್ರಸ್ತುತ ಸಂಸ್ಥೆಯಿಂದ ವಜಾ ಮಾಡಲು ಆದೇಶಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ಉಗ್ರ ಡೇವಿಡ್ ಹೆಡ್ಲಿಯನ್ನು ಅಮೆರಿಕದಲ್ಲಿ ವಿಚಾರಣೆ ನಡೆಸಲು ಹೋದ ತಂಡದಲ್ಲಿಯೂ ಬೆಹರಾ ಇದ್ದರು. ಈ ವಿಚಾರಣೆಗೆ ಸಂಬಂಧಿಸಿಯೂ ಬೆಹರಾ ವಿರುದ್ದ ಆರೋಪಗಳು ಕೇಳಿ ಬಂದಿತ್ತು.

ಅದೇ ವೇಳೆ ಬೆಹರಾ ಅವರನ್ನು ಕೇರಳದಡಿಜಿಪಿ ಆಗಿ ನೇಮಕ ಮಾಡಿದ ತೀರ್ಮಾನ ಸರಿ ಅಲ್ಲ ಎಂದು ಸಿಪಿಎಂ ಕೇಂದ್ರ ನಾಯಕರಲ್ಲಿಯೂ ಅಭಿಪ್ರಾಯ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT