ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ಅಶೋಕ್ ಚವ್ಹಾಣ್ ಸಂಬಂಧಿ ಮತ್ತೆ ಕಾಂಗ್ರೆಸ್‌ಗೆ

Published : 20 ಸೆಪ್ಟೆಂಬರ್ 2024, 15:26 IST
Last Updated : 20 ಸೆಪ್ಟೆಂಬರ್ 2024, 15:26 IST
ಫಾಲೋ ಮಾಡಿ
Comments

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಅಶೋಕ್ ಚವ್ಹಾಣ್ ಅವರ ಸಂಬಂಧಿ ಭಾಸ್ಕರ್‌ರಾವ್‌ ಖತಗಾಂವಕರ್‌ ಪಾಟೀಲ್ ಅವರು ಶುಕ್ರವಾರ ಕಾಂಗ್ರೆಸ್‌ಗೆ ಮರಳಿದ್ದಾರೆ. 

2014ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ ಭಾಸ್ಕರ್‌ ಅವರು, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಾಟೋಲೆ ಅವರು ಸಮ್ಮುಖದಲ್ಲಿ ಮತ್ತೆ ಕೈ ಪಾಳಯಕ್ಕೆ ಸೇರ್ಪಡೆಗೊಂಡರು.

ಮಹಾರಾಷ್ಟ್ರ ರಾಜಕೀಯ ರಂಗದ ಪ್ರಮುಖ ನಾಯಕರಾಗಿರುವ ಭಾಸ್ಕರ್‌ರಾವ್‌ ಅವರು ಶಾಸಕರಾಗಿ, ಸಂಸದರಾಗಿ ಮತ್ತು ಸಚಿವರಾಗಿ ಕೆಲಸ ಮಾಡಿದ್ದಾರೆ.

‘ನನ್ನ ಮನೆಗೆ ಮರಳಲು ಸಂತೋಷವಾಗುತ್ತಿದೆ. ಕಾಂಗ್ರೆಸ್ ಪಕ್ಷವು ನನಗೆ ಹಲವು ಅವಕಾಶಗಳನ್ನು ನೀಡಿದೆ. ಈ ನಡುವೆ ನಾನು ಬೇರೆ ಪಕ್ಷಕ್ಕೆ ಹೋಗಿದ್ದೆ, ಈಗ ಮತ್ತೆ ನನ್ನದೇ ಮನೆಗೆ ಮರಳಿದ್ದೇನೆ’ ಎಂದು ಭಾಸ್ಕರ್‌ರಾವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT