ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ವಿ.ವಿಯ ಮತ್ತೊಬ್ಬ ಪ್ರಾಧ್ಯಾಪಕ ರಾಜೀನಾಮೆ

Published 16 ಆಗಸ್ಟ್ 2023, 21:15 IST
Last Updated 16 ಆಗಸ್ಟ್ 2023, 21:15 IST
ಅಕ್ಷರ ಗಾತ್ರ

ನವದೆಹಲಿ: ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಬ್ಯಸಾಚಿ ದಾಸ್‌ ಅವರು ರಾಜೀನಾಮೆ ನೀಡಿದ ಮರುದಿನವೇ ಮತ್ತೊಬ್ಬ ಪ್ರಾಧ್ಯಾಪಕ  ಪುಲಾಪ್ರೆ ಬಾಲಕೃಷ್ಣನ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 

ಈ ಮಧ್ಯೆ ದಾಸ್‌ ಅವರನ್ನು ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಆಡಳಿತ ಮಂಡಳಿಗೆ  ಸಹೋದ್ಯೋಗಿಗಳು ಪತ್ರ ಬರೆದಿದ್ದಾರೆ. ಇಂಗ್ಲಿಷ್‌ ಮತ್ತು ಸೃಜನಾತ್ಮಕ ಬರವಣಿಗೆ ಇಲಾಖೆಗಳು ಸಹ ಇದಕ್ಕೆ ಬೆಂಬಲ ನೀಡಿವೆ. ಆಗಸ್ಟ್‌ 23ರ ಒಳಗಾಗಿ ದಾಸ್ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿವೆ.

ಬಾಲಕೃಷ್ಣನ್ ಅವರ ರಾಜೀನಾಮೆ ಕುರಿತು ವಿಶ್ವವಿದ್ಯಾಲಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದಾಸ್‌ ಅವರು ತಮ್ಮ ಸಂಶೋಧನಾ ಪ್ರಬಂಧ ‘ಡೆಮಾಕ್ರಟಿಕ್‌ ಬ್ಯಾಕ್‌ಸ್ಲೈಡಿಂಗ್‌ ಇನ್‌ ವರ್ಲ್ಡ್‌ ಲಾರ್ಜೆಸ್ಟ್‌ ಡೆಮಾಕ್ರಸಿ’ (ವಿಶ್ವದ ಅತಿ ದೊಡ್ಡ ಪ್ರಜಾಪ್ರುಭತ್ವದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ)  ವಿವಾದಕ್ಕೀಡಾದ ನಂತರ ರಾಜೀನಾಮೆ ಸಲ್ಲಿಸಿದ್ದರು. 

ಬಾಲಕೃಷ್ಣನ್‌ ಮತ್ತು ಇತರ ಸಹೋದ್ಯೋಗಿಗಳ ನಡೆಯನ್ನು ಸ್ವರಾಜ್‌ ಇಂಡಿಯಾ ಸಂಸ್ಥಾಪಕ ಮತ್ತು ರಾಜಕೀಯ ಕಾರ್ಯಕರ್ತ ಯೋಗೇಂದ್ರ ಯಾದವ್ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT