ಇಂದೋರ್: ವಿವಾದಿತ ಭೋಜಶಾಲಾ –ಕಮಲ್ ಮೌಲಾ ಮಸೀದಿ ಸಂಕೀರ್ಣ ಕುರಿತು ಸಮೀಕ್ಷೆಯ ವರದಿಯನ್ನು ಸಲ್ಲಿಸಲು ನಾಲ್ಕು ವಾರ ಸಮಯ ನೀಡಬೇಕು ಎಂದು ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಮಂಗಳವಾರ ಮಧ್ಯಪ್ರದೇಶ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.

ಹೈದರಾಬಾದ್ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯು (ಎನ್ಜಿಆರ್ಐ) ತಾನು ಒದಗಿಸಿರುವ ಬೃಹತ್ ದತ್ತಾಂಶಗಳನ್ನು ಅಧ್ಯಯನ ಮಾಡಿ ಅಂತಿಮ ವರದಿಯನ್ನು ಸಲ್ಲಿಸಲು ಮೂರು ವಾರಗಳ ಸಮಯ ಕೋರಿದೆ ಎಂದು ಎಎಸ್ಐ ಈಗ ಕಾಲಾವಧಿ ವಿಸ್ತರಣೆ ಕೋರಿರುವುದಕ್ಕೆ ಕಾರಣವನ್ನು ನೀಡಿದೆ.

ವಿವಾದಿತ ಸಂಕೀರ್ಣದ ಬಳಿ ನಡೆಸಿದ ಸಮೀಕ್ಷೆಯಲ್ಲಿ ಎಎಸ್ಐ ಈ ದತ್ತಾಂಶಗಳನ್ನು ಸಂಗ್ರಹಿಸಿತ್ತು. ಹಿಂದೂಗಳು ಭೋಜಶಾಲಾ ಸಂಕೀರ್ಣವನ್ನು ವಾಗ್ದೇವಿ ದೇವಸ್ಥಾನ ಎಂದು ಪರಿಗಣಿಸಿದ್ದರೆ, ಮುಸ್ಲಿಮರು ಇದನ್ನು 11ನೇ ಶತಮಾನದ ಸ್ಮಾರಕವಾದ ಕಮಲ್ ಮೌಲಾ ಮಸೀದಿ ಎಂದು ಪ್ರತಿಪಾದಿಸಿದ್ದಾರೆ.

ಹೈಕೋರ್ಟ್ನ ನಿರ್ದೇಶನದ ಅನುಸಾರ, ಎಎಸ್ಐ ಸಂಕೀರ್ಣದ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.