ಗುವಾಹಟಿ: ಅಸ್ಸಾಂ ಮೂಲದ 8 ವರ್ಷದ ಬಿನಿತಾ ಚೆಟ್ರಿ ಎನ್ನುವ ಬಾಲಕಿ ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ್ದು, ನೆರೆದವರು ಹುಬ್ಬೇರಿಸುವಂತೆ ಮಾಡಿದೆ. ತೀರ್ಪುಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ಬಿನಿತಾ ಅವರ ಡ್ಯಾನ್ಸ್ ವಿಡಿಯೊವನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೀರ್ಪುಗಾರರಲ್ಲಿ ಒಬ್ಬರಾದ ಡೇವಿಡ್ ವಿಲಯಮ್ಸ್ ಬಿನಿತಾ ಬಳಿ ಈ ವೇದಿಕೆಗೆ ಬರಲು ಕಾರಣವೇನು? ಎಂದು ಕೇಳಿದಾಗ ಆಕೆ, ’ಈ ವೇದಿಕೆಗೆ ಬರುವುದು ಮತ್ತು ಗೆಲ್ಲುವುದು ನನ್ನ ಕನಸಾಗಿದೆ. ಇಲ್ಲಿಂದ ಗೆದ್ದ ಹಣದಲ್ಲಿ ಗುಲಾಬಿ ರಾಜಕುಮಾರಿ ಮನೆಯನ್ನು (ಪಿಂಕ್ ಪ್ರಿನ್ಸಸ್ ಹೌಸ್) ಖರೀದಿಸಬೇಕು ಎಂದು ಉತ್ತರಿಸಿದ್ದಾಳೆ.

ಬಿನಿತಾ ಬಗ್ಗೆ ಪ್ರಶಂಸಿರುವ ಸಿಎಂ, ‘ಬಿನಿತಾಗೆ ನನ್ನ ಶುಭ ಹಾರೈಕೆಗಳು. ಖಂಡಿತವಾಗಿಯೂ ಮುಂದಿನ ಸುತ್ತಿಗೆ ಆಯ್ಕೆಯಾಗುತ್ತಾಳೆ. ಆಕೆ ಅವಳಿಷ್ಟದ ಮನೆಯನ್ನು ಖರೀದಿಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಕೂಡ ಬಿನಿತಾ ಡ್ಯಾನ್ಸ್ ಪ್ರದರ್ಶನದ ವಿಡಿಯೊ ಹಂಚಿಕೊಂಡು, ‘ಕೇವಲ 8 ವರ್ಷ ವಯಸ್ಸಿನವಳು ಈಕೆ. ಅಗಾಧವಾದ ಅಭ್ಯಾಸದಿಂದ ಮಾತ್ರ ಈ ರೀತಿಯ ಪರಿಣಿತಿ ಪಡೆಯಲು ಸಾಧ್ಯ. ಅಲ್ಲದೆ ಆಕೆಯ ಮಹತ್ವಕಾಂಕ್ಷೆಯ ಮೇಲಿನ ಅಚಲ ಗಮನ ಇದನ್ನು ಸಾಧ್ಯವಾಗಿಸಿದೆ. ಅದು ಗುಲಾಬಿ ರಾಜಕುಮಾರಿಯ ಮನೆಯೇ ಆಗಿರಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.