ನವದೆಹಲಿ:ರಾಜಕೀಯ ಪಕ್ಷಗಳು ಚುನಾವಣೆ ಗೆಲುವಿನ ಸಂಭ್ರಮಾಚರಣೆ ನಡೆಸದಂತೆ ಹೇರಿದ್ದ ನಿರ್ಬಂಧಗಳನ್ನು ಚುನಾವಣಾ ಆಯೋಗವು ಸಡಿಲಿಸಿದೆ.ಕೋವಿಡ್–19 ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಹಾಗೂ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಯೋಗ ನಿರ್ಬಂಧಗಳನ್ನು ವಿಧಿಸಿತ್ತು.

ಆದಾಗ್ಯೂ, ಈ ನಿರ್ಬಂಧ ಸಡಿಲಿಕೆಯು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು (ಎಸ್‌ಡಿಎಂಎ) ಹಾಗೂ ಜಿಲ್ಲಾ ಆಡಳಿತಗಳ ಸೂಚನೆಗಳಿಗೆ ಒಳಪಟ್ಟು ಮುಂದವರಿಯಲಿವೆ ಎಂದು ಆಯೋಗ ತಿಳಿಸಿದೆ.ಈ ಸಂಬಂಧ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

'ಚುನಾವಣಾ ಆಯೋಗವು 2022ರ ಜನವರಿ 8ರಂದು ಗೋವಾ, ಮಣಿಪುರ, ಪಂಜಾಬ್,ಉತ್ತರಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆ ಘೋಷಿಸಿತ್ತು. ಕೋವಿಡ್ ಸಂದರ್ಭದಲ್ಲಿ ವಿಜಯೋತ್ಸವ ಸೇರಿದಂತೆ ಹಲವು ವಿಚಾರಗಳನ್ನು ಗಮನದಲ್ಲಿರಿಸಿ ಆಯೋಗವು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಚುನಾವಣೆ ಸಂದರ್ಭದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ಇದೀಗ ಆಯೋಗವು ರಾಜ್ಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ಬಂಧಗಳನ್ನು ಸಡಿಲಿಸಿದೆ' ಎಂದು ತಿಳಿಸಿದೆ.

ಸಮಾವೇಶಗಳ ಸಂದರ್ಭದಲ್ಲಿ ಸ್ಥಳಾವಕಾಶ ಸಾಮರ್ಥ್ಯದ ಶೇ 50 ಮಂದಿಗೆ ಮಾತ್ರವೇ ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಆದರೆ,ಕೋವಿಡ್ ಪ್ರಕರಣಗಳಲ್ಲಿನ ಇಳಿಕೆಯನ್ನು ಗಮನದಲ್ಲಿರಿಸಿ ಈ ನಿರ್ಬಂಧವನ್ನು ಫೆಬ್ರುವರಿ 22ರಂದು ಹಿಂಪಡೆದಿತ್ತು.

Assembly Poll Results Live | ಪಂಚರಾಜ್ಯ ಚುನಾವಣೆ ಫಲಿತಾಂಶ: ಪಂಜಾಬ್ ಸಿಎಂ ಚನ್ನಿ, ಕ್ಯಾಪ್ಟನ್ ಅಮರಿಂದರ್ಗೆ ಸೋಲು

ಒಳಾಂಗಣ ಮತ್ತು ಹೊರಾಂಗಣ ಪ್ರದೇಶದಲ್ಲಿ ಸಭೆಗಳನ್ನು ನಡೆಸುವುದಕ್ಕೆ ಫೆಬ್ರುವರಿ 6 ರಂದು ಅನುಮತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.