ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಠಿಕತೆ, ನಿರ್ಜಲೀಕರಣದಿಂದ 15 ಮಕ್ಕಳ ಸಾವು

Published 3 ಮಾರ್ಚ್ 2024, 13:13 IST
Last Updated 3 ಮಾರ್ಚ್ 2024, 13:13 IST
ಅಕ್ಷರ ಗಾತ್ರ

ಕೈರೊ: ಅಪೌಷ್ಠಿಕತೆ ಮತ್ತು ನಿರ್ಜಲೀಕರಣದಿಂದಾಗಿ ಗಾಜಾದ ಕಮಲ್‌ ಅದ್ವಾನ್‌ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದೀಚೆಗೆ ಕನಿಷ್ಠ 15 ಮಕ್ಕಳು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಆರೋಗ್ಯ ಸಚಿವಾಲಯ ಹೇಳಿಕೆ ಮೂಲಕ ತಿಳಿಸಿದೆ.

‘ಇದೇ ಸಮಸ್ಯೆಯಿಂದ ಇನ್ನೂ ಆರು ಮಕ್ಕಳು ಬಳಲುತ್ತಿದ್ದು, ಅವರಿಗೆ ತೀವ್ರ ನಿಗಾ ಘಟಕಗಳಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಐಸಿಯುನಲ್ಲಿ ಎಲೆಕ್ಟ್ರಿಕ್ ಜನರೇಟರ್‌ನಿಂದ ವಿದ್ಯುತ್‌ ಹಾಗೂ ಆಮ್ಲಜನಕ ಸರಬರಾಜು ನಿಂತುಹೋಗಿದೆ’ ಎಂದು ವಕ್ತಾರ ಅಶ್ರಫ್‌–ಅಲ್‌ ಕಿದ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT