ನವದೆಹಲಿ: ‘ಆನಂದ್ ಬಜಾರ್’ ಪತ್ರಿಕಾ ಸಮೂಹದ ಗೌರವ ಸಂಪಾದಕ ಮತ್ತು ಉಪಾಧ್ಯಕ್ಷರಾಗಿರುವ ಅವೀಕ್ ಸರ್ಕಾರ್ ಅವರು ದೇಶದ ಪ್ರಮುಖ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಪಿಟಿಐ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾಯ್ಕೆ ಮಾಡಲಾಗಿದೆ.

‘ಪ್ರಜಾವಾಣಿ’ ಮತ್ತು ’ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಮಾತೃಸಂಸ್ಥೆಯಾದ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ ನಿರ್ದೇಶಕ ಕೆ.ಎನ್.ಶಾಂತ ಕುಮಾರ್ ಅವರು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಇತರ ಪದಾಧಿಕಾರಿಗಳು: ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ವಿಜಯ್ ಕುಮಾರ್ ಚೋಪ್ರಾ (ಪಂಜಾಬ್ ಕೇಸರಿ), ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾ), ಎನ್. ರವಿ (ದ ಹಿಂದು), ವಿವೇಕ್ ಗೋಯೆಂಕಾ (ದ ಎಕ್ಸ್‌ಪ್ರೆಸ್ ಗ್ರೂಪ್), ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗ್ರತ್), ರಿಯಾದ್ ಮ್ಯಾಥ್ಯು (ಮಲಯಾಳ ಮನೋರಮ), ಎಂ.ವಿ. ಶ್ರೇಯಾಂಶ್ ಕುಮಾರ್ (ಮಾತೃಭೂಮಿ), ಆರ್. ಲಕ್ಷ್ಮೀಪತಿ (ದಿನಮಲರ್), ಹೊರ್‌ಮುಸ್ಜಿ ಎನ್. ಕಾಮಾ (ಬಾಂಬೆ ಸಮಾಚಾರ್),ಪ್ರವೀಣ್ ಸೋಮೇಶ್ವರ (ಹಿಂದುಸ್ತಾನ್ ಟೈಮ್ಸ್), ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ದೀಪಕ್ ನಯ್ಯರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಹಿರಿಯ ಪತ್ರಕರ್ತ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯ ಮಾಜಿ ಅಧ್ಯಕ್ಷ ಟಿ.ಎನ್. ನಿನಾನ್ ಮತ್ತು ಟಾಟಾ ಸನ್ಸ್ ಲಿಮಿಟೆಡ್‌ನ ಮಾಜಿ ಕಾರ್ಯಕಾರಿ ನಿರ್ದೇಶಕ ಆರ್. ಗೋಪಾಲಕೃಷ್ಣನ್‌ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.