ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮ ಮಂದಿರದಲ್ಲಿ ನವೆಂಬರ್ 25ರಂದು ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ರಾಮಮಂದಿರ ಕಾಮಗಾರಿ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಬುಧವಾರ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. 'ರಾಮ ಭಾರಾತ’ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರಿಗೆ ರಾಮನ ದರ್ಶನವನ್ನು ಕಲ್ಪಿಸುವ ಸಲುವಾಗಿ ಮಂದಿರವನ್ನು ನವೆಂಬರ್ 26ರಂದು 16 ಗಂಟೆಗೂ ಹೆಚ್ಚು ಕಾಲ ತೆರೆಯಲಾಗುವುದು ಎಂದು ಮಿಶ್ರಾ ತಿಳಿಸಿದರು.

ಭಕ್ತರನ್ನು ನಿಭಾಯಿಸುವ ಕುರಿತು ಎಲ್ಲ ಉದ್ಯೋಗಿಗಳಿಗೆ ಎರಡು ದಿನ ತರಬೇತಿ ನೀಡಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಿರ್ದೇಶನ ನೀಡಿದ್ದಾರೆ. ದೇವಾಲಯದ ಗೋಪುರದ ಮೇಲೆ ಧ್ವಜ ಇರಿಸಲು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದಲ್ಲಿರುವ ಏಳು ದೇವಾಲಯಗಳಲ್ಲಿಯೂ ಧ್ವಜಗಳನ್ನು ತ್ರಿಕೋನಕಾರದಲ್ಲಿ ಇರಿಸಲಾಗುತ್ತದೆ. ಅವು ಮುಖ್ಯ ದೇವಾಲಯದ ಧ್ವಜಕ್ಕಿಂತ ಚಿಕ್ಕದಾಗಿರುತ್ತವೆ ಎಂದು ಅವರು ತಿಳಿಸಿದರು.

ಧ್ವಜಾರೋಹಣದ ಎರಡು ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ನಡೆದಿವೆ. ದೇವಾಲಯದ ಎಲ್ಲ ಗೋಪುರಗಳ ಮೇಲಿರುವ ಧ್ವಜಗಳು ಶಾಶ್ವತವಾಗಿ ಅಲ್ಲೇ ಇರುತ್ತವೆ ಮತ್ತು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಅವುಗಳನ್ನು ಬದಲಾಯಿಸಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಹ್ವಾನಿಸಲು ಸಾಧ್ಯವಾಗದ ಗಣ್ಯರನ್ನು ಈ ಬಾರಿ ಆಹ್ವಾನಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.