ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಾಟದ ವೇಳೆ ಬೆಂಗಳೂರು-ಜೈಪುರ ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಮಾನ ಸಿಬ್ಬಂದಿಯ ನೆರವಿನೊಂದಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ ವೈದ್ಯೆ
Last Updated 17 ಮಾರ್ಚ್ 2021, 8:22 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು-ಜೈಪುರ ನಡುವೆ ಸಂಚರಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಬುಧವಾರ ಬೆಳಿಗ್ಗೆ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನಿಂದ ಜೈಪುರಕ್ಕೆ ಇಂಡಿಗೊ (ವಿಮಾನ ಸಂಖ್ಯೆ 6ಇ 469) ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಡಾ. ಸುಬಹಾನಾ ನಜೀರ್ ಅವರು, ವಿಮಾನದ ಸಿಬ್ಬಂದಿಯ ನೆರವಿನಿಂದ ಆ ಮಹಿಳೆಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ‘ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

‘ಆಕಾಶದಲ್ಲಿ ವಿಮಾನ ಸಂಚರಿಸುವ ವೇಳೆಯಲ್ಲೇ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ‘ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಬೆಂಗಳೂರಿನಿಂದ ಬುಧವಾರ ಬೆಳಿಗ್ಗೆ 5.45ಕ್ಕೆ ಟೇಕ್ ಆಫ್ ಆದ ಇಂಡಿಗೊ ವಿಮಾನ, 8 ಗಂಟೆ ಸುಮಾರಿಗೆ ಜೈಪುರದಲ್ಲಿ ಇಳಿಯಿತು. ಇದಕ್ಕೂ ಮೊದಲು ವಿಮಾನ ಸಿಬ್ಬಂದಿ, ಜೈಪುರ ವಿಮಾನ ನಿಲ್ದಾಣದಲ್ಲಿ ಆಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡುವಂತೆ, ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವೈದ್ಯೆ ಡಾ. ಸುಬಹಾನಾ ನಜೀರ್ ಅವರನ್ನು ಜೈಪುರದ ಇಂಡಿಗೊ ಸಿಬ್ಬಂದಿ ಸ್ವಾಗತಿಸಿದರು
ವೈದ್ಯೆ ಡಾ. ಸುಬಹಾನಾ ನಜೀರ್ ಅವರನ್ನು ಜೈಪುರದ ಇಂಡಿಗೊ ಸಿಬ್ಬಂದಿ ಸ್ವಾಗತಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT