ಬರೇಲಿ: ಬರೇಲಿಯಲ್ಲಿ ‘ಐ ಲವ್ ಮುಹಮ್ಮದ್’ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೇಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಮೌಲ್ವಿ ತೌಕೀರ್ ರಜಾ ಖಾನ್ ಸಹವರ್ತಿ ನದೀಮ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂಸಾಚಾರವು ಸ್ವಯಂಪ್ರೇರಿತವಲ್ಲ. ಬದಲಿಗೆ ಇದೊಂದು ಪೂರ್ವನಿಯೋಜಿತ ಘಟನೆಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ.

‘ನದೀಮ್ ಪ್ರತಿಭಟನೆಯ ರೂವಾರಿ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ವಾಟ್ಸ್ಆ್ಯಪ್ ಮೂಲಕ 55 ಜನರಿಗೆ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ್ದಾನೆ. ಬಳಿಕ ಸುಮಾರು 1,600 ಜನರನ್ನು ಸೇರಿಸಿದ್ದಾನೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಎಎ ಮತ್ತು ಎನ್ಆರ್ಬಿ ವಿರೋಧಿ ಪ್ರತಿಭಟನೆಗಳ ಮಾದರಿಯಲ್ಲಿ ಆಂದೋಲನವನ್ನು ಪ್ರಾರಂಭಿಸಲು ಸಂಚು ರೂಪಿಸಿದ್ದು, ಪ್ರತಿಭಟನೆಯಲ್ಲಿ ಅಪ್ರಾಪ್ತ ವಯಸ್ಸಿನವರನ್ನು ಮುಂಚೂಣಿಯಲ್ಲಿ ಇರಿಸಲಾಗಿತ್ತು. ನದೀಮ್ ಮತ್ತು ಆತನ ಸಹಚರರು ಜನರನ್ನು ಪ್ರಚೋದಿಸಲು ಸಕ್ರಿಯರಾಗಿ ತೊಡಗಿದ್ದರು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.