ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸರ್ ಶಾ ಸುಲೈಮಾನ್ ಹಾಲ್ನಲ್ಲಿ ಮಧ್ಯಾಹ್ನದ ಭೋಜನಕ್ಕೆ ಬೀಫ್ ಬಿರಿಯಾನಿ ನೀಡಲಾಗುವುದು ಎನ್ನುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
.ಅಲಿಗಢ ವಿ.ವಿಗೆ ಬಾಂಬ್ ಬೆದರಿಕೆ .
ಈ ನೋಟಿಸ್ ಅನ್ನು ಇಬ್ಬರು ಅಧಿಕೃತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಹೊರಡಿಸಿದ್ದು, ‘ಭಾನುವಾರ ಭೋಜನದ ಪಟ್ಟಿ ಬದಲಾಗಿದೆ. ಬೇಡಿಕೆಯನ್ನು ಮನ್ನಿಸಿ ಚಿಕನ್ ಬಿರಿಯಾನಿ ಬದಲು ಬೀಫ್ ಬಿರಿಯಾನಿ ನೀಡಲಾಗುವುದು’ ಎಂದು ಬರೆಯಲಾಗಿದೆ.

ನೋಟಿಸ್ ಬಗ್ಗೆ ಹುಯಿಲು ಎದ್ದ ಬೆನ್ನಲ್ಲೇ, ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದ್ದು, ‘ಟೈಪಿಂಗ್ ದೋಷದಿಂದಾಗಿ ಪ್ರಮಾದ ಸಂಭವಿಸಿದೆ. ಕಾರಣಕರ್ತರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು’ ಎಂದು ಹೇಳಿದೆ.
.ಅಲಿಗಢ ವಿ.ವಿ ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ: ಯೋಗಿ.
ಸರ್ ಶಾ ಸುಲೈಮಾನ್ ಹಾಲ್ನಲ್ಲಿದ್ದ ವಿದ್ಯಾರ್ಥಿಗಳು ನೋಟಿಸ್ ಗಮನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ.

ಪ್ರಾರಂಭದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲು ವಿವಿ ನಿರಾಕರಿಸಿತಾದರೂ, ವಿವಾದ ಉಲ್ಬಣಗೊಂಡ ಬಳಿಕ, ‘ಉದ್ದೇಶಪೂರ್ವಕವಲ್ಲದ ಪ್ರಮಾದ’ ಎಂದು ಹೇಳಿದೆ.
.ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾನಮಾನ ಅಬಾಧಿತ: ಸುಪ್ರೀಂ ಕೋರ್ಟ್ .
‘ಘಟನೆ ಬಗ್ಗೆ ನಮ್ಮ ಗಮನಕ್ಕೆ ತರಲಾಯಿತು. ಆಹಾರದ ವೇಳಾಪಟ್ಟಿ ಬಗೆಗಿನ ನೋಟಿಸ್ ಗಮನಿಸಿದೆವು. ಅದರಲ್ಲಿ ಟೈಪಿಂಗ್ ದೋಷ ಇತ್ತು. ಅದರಲ್ಲಿ ಯಾವುದೇ ಅಧಿಕೃತ ಸಹಿ ಇಲ್ಲದ ಕಾರಣ ತಕ್ಷಣವೇ ನೋಟಿಸ್ ಅನ್ನು ಹಿಂಪಡೆಯಲಾಗಿದೆ’ ಎಂದು ವಿವಿ ಸ್ಪಷ್ಟನೆ ನೀಡಿದೆ.

ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ ಎಂದು ವಿವಿ ತಿಳಿಸಿದೆ.
.ಪರಿಷತ್ತಿಗೆ ನೇಮಕ: ಅಲಿಗಢ ಮುಸ್ಲಿಂ ವಿ.ವಿ ಕುಲಪತಿ ರಾಜೀನಾಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.