ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ | ಮನುಷ್ಯನ ಮೇಲೆ ಕೋವ್ಯಾಕ್ಸಿನ್: ಪ್ರಯೋಗ ಆರಂಭ

Last Updated 17 ಜುಲೈ 2020, 12:14 IST
ಅಕ್ಷರ ಗಾತ್ರ

ಚಂಡೀಗಡ: ಭಾರತ್‍ ಬಯೊಟೆಕ್‍ ಸಂಸ್ಥೆಯು ಕೋವಿಡ್‍-19 ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನುಮನುಷ್ಯನ ಮೇಲೆ ಪ್ರಯೋಗಿಸುವ ಪ್ರಕ್ರಿಯೆಗೆ ರೋಹ್ಟಕ್‍ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಾಲನೆ ನೀಡಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್‍ ವಿಜ್‍ ಟ್ವೀಟ್ ಮಾಡಿದ್ದಾರೆ.

‘ಮನುಷ್ಯನ ಮೇಲೆಕೊವ್ಯಾಕ್ಸಿನ್‍ನ ಪ್ರಯೋಗ ಆರಂಭವಾಗಿದೆ. ಮೂವರನ್ನು ಇದಕ್ಕಾಗಿ ಇಂದು ನೋಂದಾಯಿಸಲಾಗಿದೆ. ಎಲ್ಲರಿಗೂ ಲಸಿಕೆ ಕೊಡಲಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆಗಿರುವ ವಿಜ್‍ ಶುಕ್ರವಾರ ತಿಳಿಸಿದ್ದಾರೆ.

ಮನುಷ್ಯನ ಮೇಲೆ ಲಸಿಕೆಯ ಪ್ರಯೋಗ ನಡೆಸಲು ಭಾರತ್ ಬಯೊಟೆಕ್‍ಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಿಂದ ಇತ್ತೀಚೆಗೆ ಅನುಮೋದನೆ ದೊರೆತಿತ್ತು. ಕೊರೊನಾ ಚಿಕಿತ್ಸೆಗಾಗಿ ಸದ್ಯ ಭಾರತದಲ್ಲಿ ಏಳು ವ್ಯಾಕ್ಸಿನ್ ಅಭಿವೃದ್ಧಿ ವಿವಿಧ ಹಂತದಲ್ಲಿದೆ. ಎರಡು ವ್ಯಾಕ್ಸಿನ್‍ಗಳಿಗೆ ಔಷಧ ನಿಯಂತ್ರಣ ಮಹಾಪ್ರಬಂಧಕರು ಅನುಮತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT