ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಖಾಘಾತ: ಬಿಹಾರದಲ್ಲಿ ಭದ್ರತಾಪ‍ಡೆಯ ನಾಲ್ವರು ಸಿಬ್ಬಂದಿ ಸಾವು

Published 1 ಜೂನ್ 2024, 16:28 IST
Last Updated 1 ಜೂನ್ 2024, 16:28 IST
ಅಕ್ಷರ ಗಾತ್ರ

ಸಾಸಾರಾಂ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಪಡೆಯ ನಾಲ್ವರು ಸಿಬ್ಬಂದಿ ಶಾಖಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ನಾಗಾಲ್ಯಾಂಡ್‌ನ ಇಬ್ಬರು ಸೇರಿದಂತೆ ಭದ್ರತಾಪಡೆಯ ಐವರು ಸಿಬ್ಬಂದಿ ರೋಹ್ತಾಸ್‌ನಲ್ಲಿ ಮೃತಪಟ್ಟಿದ್ದು, ಇವರಲ್ಲಿ ನಾಲ್ವರು ಶಾಖಾಘಾತದಿಂದ ಸತ್ತಿದ್ದಾರೆ ಎಂದು ಡಿಐಜಿ ನವೀನ್‌ ಚಂದ್ರ ಜಾ ತಿಳಿಸಿದರು. 

ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ನ ನಿಕಿಯೆ ಸುಮಿ ಮತ್ತು ಪಿತ್ಲೋಹಿ ಲೋಶಾ ಹಾಗೂ ಬಿಹಾರ ಪೊಲೀಸ್‌ನ ಸುಭಾಷ್‌ ಪ್ರಸಾದ್‌ ಸಿಂಗ್‌, ದೇವಂತ್‌ ರಾಮ್‌ ಮತ್ತು ಸಮೀವುಲ್ಲಾ ಮೃತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT