ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಮಸೂದೆ: ಬಿಹಾರ ವಿಧಾನಸಭೆ ಅನುಮೋದನೆ

Published : 9 ನವೆಂಬರ್ 2023, 15:51 IST
Last Updated : 9 ನವೆಂಬರ್ 2023, 15:51 IST
ಫಾಲೋ ಮಾಡಿ
Comments

ಪಟ್ನಾ: ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆಯು ಗುರುವಾರ ಒಪ್ಪಿಗೆ ನೀಡಿದೆ. 

ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಈಗ ಮೀಸಲಾತಿಯು ಒಟ್ಟು ಶೇಕಡ 75ರಷ್ಟು ಆಗುತ್ತದೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ನೀಡುವ ಶೇ 10ರಷ್ಟು ಮೀಸಲಾತಿಯೂ ಸೇರಿದೆ’ ಎಂದು ವಿವರಿಸಿದರು.

ವಿಧಾನಸಭೆಯ ಸರ್ವಾನುಮತದಿಂದ ಒಪ್ಪಿಗೆ ನೀಡಿರುವ ಮಸೂದೆಯು ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡುವ ಮೀಸಲಾತಿಯನ್ನು ಈಗಿನ ಶೇ 50ರಿಂದ ಶೇ 65ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುತ್ತದೆ.

ಬಿಹಾರ ಸರ್ಕಾರವು ನಡೆಸಿರುವ ಜಾತಿ ಗಣತಿಯ ವರದಿಯನ್ನು ಆಧರಿಸಿ, ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ಮಸೂದೆಯಲ್ಲಿ ಹೇಳಿರುವ ಪ್ರಕಾರ, ಎಸ್‌ಟಿ ಸಮುದಾಯಕ್ಕೆ ನೀಡುವ ಮೀಸಲಾತಿ ಪ್ರಮಾಣವು ಶೇ 2ಕ್ಕೆ ಏರಿಕೆ ಆಗಲಿದೆ. ಎಸ್‌ಸಿ ಸಮುದಾಯಗಳಿಗೆ ಶೇ 20ರಷ್ಟು ಮೀಸಲಾತಿ ಸಿಗಲಿದೆ. ಇಬಿಸಿ ವರ್ಗಗಳಿಗೆ ಶೇ 25ರಷ್ಟು ಹಾಗೂ ಒಬಿಸಿ ವರ್ಗಗಳಿಗೆ ಶೇ 15ರಷ್ಟು ಮೀಸಲಾತಿ ಸಿಗಲಿದೆ.

ಜಾತಿ ಗಣತಿಯ ವರದಿಯನ್ನು ಆಧರಿಸಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳನ್ನು ಮೇಲಕ್ಕೆತ್ತಲು ಇನ್ನಷ್ಟು ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ನಿತೀಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT