ಸುಶೀಲ್ ಕುಮಾರ್ ಮೋದಿ ಅವರು ಟ್ವೀಟ್ ಮಾಡಿದ್ದು, 'ಪರೀಕ್ಷೆಯಲ್ಲಿ ಕೊರೊನಾಪಾಸಿಟಿವ್ ಬಂದಿದೆ. ಆರೋಗ್ಯ ಸ್ಥಿತಿ ಸಹಜವಾಗಿದೆ. ಕಳೆದ ಎರಡು ದಿನಗಳಿಂದ ಸ್ವಲ್ಪ ಜ್ವರ ಕಾಣಿಸಿಕೊಂಡಿದೆ. ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲು ಪಟ್ನಾದ ಏಮ್ಸ್ಗೆ ದಾಖಲಾಗಿದ್ದೇನೆ. ಶ್ವಾಸಕೋಶದ ಸಿಟಿ ಸ್ಕ್ಯಾನ್ನಲ್ಲಿ ಫಲಿತಾಂಶ ಸಹಜವಾಗಿರುವುದು ತಿಳಿದು ಬಂದಿದೆ. ಶೀಘ್ರದಲ್ಲಿಯೇ ಚುನಾವಣಾ ಪ್ರಚಾರಕ್ಕೆ ಮರಳುವೆ' ಎಂದಿದ್ದಾರೆ.