ನವದೆಹಲಿ: ‘ಆಗಸ್ಟ್ 1ರಂದು ಪ್ರಕಟಿಸಿರುವ ಮತದಾರರ ಪಟ್ಟಿಯ ಕರಡುವಿನಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡುವಂತೆ ಇಲ್ಲವೇ ತೆಗೆಯುವ ಕುರಿತಂತೆ ಬಿಹಾರದ ಯಾವುದೇ ರಾಜಕೀಯ ಪಕ್ಷವು ಆಯೋಗವನ್ನು ಸಂಪರ್ಕಿಸಿಲ್ಲ’ ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ.

‘ಕರಡು ಪ್ರಕಟಗೊಂಡ ನಂತರ, ಆಗಸ್ಟ್ 1ರ ಮಧ್ಯಾಹ್ನ 3ರಿಂದ ಆಗಸ್ಟ್ 3ರಂದು ಮಧ್ಯಾಹ್ನ 3 ಗಂಟೆ ವರೆಗಿನ ಅವಧಿಯಲ್ಲಿ ಇಂತಹ ಯಾವುದೇ ಬೇಡಿಕೆ ಅಥವಾ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ’ ಎಂದೂ ಆಯೋಗವು ಹೇಳಿದೆ.

ತಮ್ಮ ಹೆಸರು ಸೇರಿಸುವಂತೆ ಇಲ್ಲವೇ ತಮಗೆ ಅರ್ಹತೆ ಇಲ್ಲದ ಕಾರಣ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಕೋರಿ ವ್ಯಕ್ತಿಗತವಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 941 ಎಂದು ಹೇಳಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಥವಾ ತೆಗೆದು ಹಾಕುವುದಕ್ಕೆ ಸೆಪ್ಟೆಂಬರ್ 1ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.