ಪಟ್ನಾ: ಬಿಹಾರದ ಜನರು ವಿವೇಚನೆಯಿಂದ ಮತ ಚಲಾವಣೆ ಮಾಡುವ ಮೂಲಕ ರಾಜ್ಯದಲ್ಲಿ ಬದಲಾವಣೆ ತರಬೇಕು ಎಂದು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಮಂಗಳವಾರ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಕಾರ್ಗಹರ್ನಲ್ಲಿ ಮತ ಚಲಾವಣೆ ಮಾಡಿ, ಅವರು ಮಾತನಾಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸರಿಯಾದ ಪಕ್ಷಕ್ಕೆ ಜನರು ಮತ ಚಲಾವಣೆ ಮಾಡದಿದ್ದರೆ, ಇನ್ನೂ ಐದು ವರ್ಷಗಳ ಕಾಲ ರಾಜ್ಯವು ಭ್ರಷ್ಟಾಚಾರ, ನಿರುದ್ಯೋಗ ಹಾಗೂ ವಲಸೆಗೆ ಗುರಿಯಾಗುತ್ತದೆ ಎಂದು ಹೇಳಿದ್ದಾರೆ.

ಬಿಹಾರದ ಜನರು ಮತ ಚಲಾವಣೆಯ ದಿನದಂದು ನಿಮ್ಮ ಮನೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಮತಗಟ್ಟೆಗೆ ತೆರಳಿ ನಿಮ್ಮ ಭವಿಷ್ಯಕ್ಕಾಗಿ ಮತ ಚಲಾಯಿಸಿ ಎಂದು ತಿಳಿಸಿದ್ದಾರೆ.

ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಚುನಾವಣೆಯು ಒಳ್ಳೆಯ ಅವಕಾಶವಾಗಿದೆ. ಈ ಮೂಲಕ ಶಿಕ್ಷಣ ಹಾಗೂ ಉದ್ಯೋಗ ವಲಯದಲ್ಲಿ ಬದಲಾವಣೆ ಸಾಧ್ಯ ಎಂದಿದ್ದಾರೆ.

ಬಿಹಾರದ 122 ವಿಧಾನಸಭಾ ಕ್ಷೇತ್ರಗಳಿಗೆ ಇಂದು(ಮಂಗಳವಾರ) ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ 31.38 ರಷ್ಟು ಮತದಾನವಾಗಿದೆ.
.ಬಿಹಾರ ಚುನಾವಣೆ: ಮತಗಟ್ಟೆ ಬಳಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.