ಜನಪ್ರಿಯ ಟಾಕ್ ಶೋ ' ಕಾಫಿ ವಿತ್ ಕರಣ್ ' ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಈ ಕುರಿತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಕ್ರಿಕೆಟ್ ತಾರೆಯರನ್ನು ಆಹ್ವಾನಿಸದಿರಲು ಕಾರಣವೇನು ಎಂಬುದನ್ನು ಸಿನಿಮಾ ನಿರ್ಮಾಪಕ ಕರಣ್ ಜೋಹರ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಈ ಕಾರ್ಯಕ್ರಮದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ, ವಿರಾಟ್ ಕೊಹ್ಲಿಯವರಿಗೆ ತಮ್ಮ ಶೋನಲ್ಲಿ ಭಾಗವಹಿಸುವಂತೆ ಇದುವರೆಗೂ ಆಹ್ವಾನಿಸಿಲ್ಲ ಎಂದು ಜೋಹರ್ ಅವರು ಸಾನಿಯಾ ಮಿರ್ಜಾ ಅವರ ಜೊತೆಗಿನ ‘ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ’ ಎಂಬ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಾನಿಯಾ ಮಿರ್ಜಾ ಅವರು ಕರಣ್ ಜೋಹರ್ ಜೊತೆ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಎಂದಿಗೂ ಕಾಣಿಸಿಕೊಳ್ಳದ ವ್ಯಕ್ತಿಯ ಬಗ್ಗೆ ಹೇಳಿ ಎಂದು ಕೇಳಿದ್ದಾರೆ. ಜೋಹಾರ್, ಸ್ವಲ್ಪ ಸಮಯ ತೆಗೆದುಕೊಂಡು ಟೀಂ ಇಂಡಿಯಾ ಮಾಜಿ ನಾಯಕನ ಹೆಸರು ಹೇಳಿದರು.

‘ನಾನು ವಿರಾಟ್ ಅವರನ್ನು ಶೋನಲ್ಲಿ ಭಾಗವಹಿಸುವಂತೆ ಎಂದಿಗೂ ಕೇಳಿಲ್ಲ. 2019ರ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡುವಾಗ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್ ಅವರಿಂದ ಉಂಟಾದ ವಿವಾದದ ಬಳಿಕ ನಾನು ಯಾವುದೇ ಕ್ರಿಕೆಟಿಗರನ್ನು ಶೋಗೆ ಬನ್ನಿ ಎಂದು ಆಹ್ವಾನಿಸುತ್ತಿಲ್ಲ’ ಎಂದರು.

2019 ರಲ್ಲಿ ಪಾಂಡ್ಯ ಮತ್ತು ರಾಹುಲ್ ಅವರು ನೀಡಿದ್ದ ಮಹಿಳೆಯರ ಕುರಿತಾದ ಅನುಚಿತ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಮಾತ್ರವಲ್ಲ ಇಬ್ಬರು ತಾರಾ ಆಟಗಾರರು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಹೇಳಿಕೆಯ ಬಳಿಕ ಬಿಸಿಸಿಐ ಇಬ್ಬರು ಕ್ರಿಕೆಟಿಗರನ್ನು ಕೆಲವು ಪಂದ್ಯಗಳಿಂದ ಅಮಾನತುಗೊಳಿಸಿತ್ತು.

‘ಈ ಘಟನೆಯು ನನ್ನ ಮೇಲೆ ವೈಯಕ್ತಿಕ ಪರಿಣಾಮ ಬೀರಿತು ಮತ್ತು ಅತಿಥಿಗಳನ್ನು ಆಹ್ವಾನಿಸುವ ವಿಧಾನವನ್ನು ಬದಲಾಯಿಸಿಕೊಂಡೆ’ ಎಂದು ಜೋಹರ್ ಹೇಳಿದರು. ಆದರೆ, ಬಾಲಿವುಡ್ ನಟ ರಣಬೀರ್ ಕಪೂರ್ ಟಾಕ್ ಶೋನಲ್ಲಿ ಕಾಣಿಸಿಕೊಳ್ಳಲು ನಾನು ಕೊಟ್ಟ ಆಹ್ವಾನವನ್ನು ಪದೇ ಪದೇ ತಿರಸ್ಕರಿಸಿದ್ದಾರೆ ಎಂದರು.
.ಮತ್ತೊಮ್ಮೆ ನಿರ್ದೇಶನಕ್ಕೆ ಇಳಿದ ನಿರ್ಮಾಪಕ ಕರಣ್ ಜೋಹರ್: ಹೊಸ ಚಿತ್ರ ಘೋಷಣೆ.37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ: ಅಪರೂಪದ ಚಿತ್ರಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.