ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಎನ್ಡಿಎ ಮೈತ್ರಿಕೂಟ ಭಾರಿ ಗೆಲುವಿನತ್ತ ಮುನ್ನಡೆದಿದೆ. ಈ ನಡುವೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಮೋದಿ ನಾಯಕತ್ವದ ಮೇಲೆ ಜನರು ಮತ್ತೊಮ್ಮೆ ನಂಬಿಕೆ ಹೊಂದಿದ್ದಾರೆ ಎಂದು ಹೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಸಂಸದ ಮತ್ತು ಮುಖ್ಯ ವಕ್ತಾರ ಅನಿಲ್ ಬಲುನಿ, ಬಿಹಾರದಲ್ಲಿ ಎನ್ಡಿಎ ಭರ್ಜರಿ ಗೆಲುವಿನತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
.Bihar Election Results 2025 LIVE: ಅಭಿವೃದ್ಧಿಗೆ ಜನರು ಒತ್ತಿರುವ ಮುದ್ರೆ: ಜೆ.ಪಿ. ನಡ್ಡಾ.Bihar Results: ಮತ ಗಳಿಕೆ ಪ್ರಮಾಣದಲ್ಲಿ ಬಿಜೆಪಿ, ಜೆಡಿಯುಗಿಂತ ಆರ್ಜೆಡಿ ಮುಂದು.
ಬಿಹಾರದಲ್ಲಿ ಪ್ರಧಾನಿ ಮೋದಿ ಮಾಡಿದ ಚುನಾವಣಾ ಪ್ರಚಾರದ ವಿಡಿಯೊವನ್ನು ಹಂಚಿಕೊಂಡಿರುವ ಅನಿಲ್, ರಾಜ್ಯದಲ್ಲಿ ಎನ್ಡಿಎ ಅತಿದೊಡ್ಡ ವಿಜಯವನ್ನು ದಾಖಲಿಸಲಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಸಹ ಮೋದಿ ಚುನಾವಣಾ ಪ್ರಚಾರ ಭಾಷಣದ ವಿಡಿಯೊವನ್ನು ಹಂಚಿಕೊಂಡಿದ್ದು, ಮೋದಿ– ನಿತೀಶ್ ಜೋಡಿ ಮೋಡಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ವಿರೋಧ ಪಕ್ಷವು ತನ್ನ ಪರಂಪರೆಯನ್ನು ಕಳೆದುಕೊಂಡಿಲ್ಲ, ರಾಹುಲ್ ನಾಯಕತ್ವದಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ನೆಹರೂ ಹುಟ್ಟುಹಬ್ಬದಂದು ಕಾಂಗ್ರೆಸ್ಗೆ ರಾಹುಲ್ ನೀಡಿದ ಉಡುಗೊರೆ 'ಸೋಲುಗಳು' ಎಂದು ವ್ಯಂಗ್ಯವಾಡಿದ್ದಾರೆ.
.Bihar | ಪಡೆದಿದ್ದು 29 ಕ್ಷೇತ್ರ; 21ರಲ್ಲಿ ಮುನ್ನಡೆ; ಚಿರಾಗ್ ಮೂಡಿಸಿದ ಅಚ್ಚರಿ.ಬಿಹಾರದಲ್ಲೂ ಮತಕಳವು: ಸಿಎಂ ಸಿದ್ದರಾಮಯ್ಯ ಆರೋಪ.
ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಆರ್ಜೆಡಿ ನಾಯಕತ್ವವನ್ನು ಟೀಕಿಸಿದ್ದು, ಲಾಲು ಅವರ ಇಬ್ಬರು ಪುತ್ರರೂ ಸೋಲಿನತ್ತ ಹೆಜ್ಜೆ ಹಾಕಿದ್ದರೆ ಎಂದಿದ್ದಾರೆ.

ಸದ್ಯದ ಟ್ರೆಂಡ್ ಪ್ರಕಾರ 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ 206 ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದೆ.

ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾದಿಯಲ್ಲಿದೆ ಎಂದು ಚುನಾವಣಾ ಆಯೋಗದ ಫಲಿತಾಂಶ ವರದಿಯು ಸೂಚಿಸುತ್ತದೆ.
.ಡಿಎಂಕೆ ಕಾರ್ಯಕರ್ತರು ಎಸ್ಐಆರ್ ಕರಪತ್ರ ಹಂಚುತ್ತಿದ್ದಾರೆ: ಎಐಡಿಎಂಕೆ ಆರೋಪ.Bihar Results: ಅಭೂತಪೂರ್ವ ಜಯದತ್ತ ಎನ್ಡಿಎ; ಮಹಾಘಟಬಂಧನಕ್ಕೆ ಹೀನಾಯ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.