ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನಗಳಲ್ಲಿ ಒಟ್ಟಾರೆ ಶೇ 66.91ರಷ್ಟು ಮತದಾನವಾಗಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಎಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ತಿಳಿಸಿದೆ.

ಮೊದಲ ಹಂತದಲ್ಲಿ ಶೇ 65.08 ಹಾಗೂ ಎರಡನೇ ಹಂತದಲ್ಲಿ ಶೇ 68.76ರಷ್ಟು ಮತದಾನವಾಗಿದೆ.

ಅಲ್ಲದೆ ರಾಜ್ಯದ ಇತಿಹಾಸದಲ್ಲಿ ಮಹಿಳಾ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂದು ಇಸಿಐ ತಿಳಿಸಿದೆ.

ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇ 61.56ರಷ್ಟು ಪುರುಷರಿಗೆ ಹೋಲಿಸಿದರೆ ಶೇ 69.04ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ.

ನವೆಂಬರ್ 11ರಂದು ನಡೆದ ಎರಡನೇ ಹಾಗೂ ಅಂತಿಮ ಹಂತದಲ್ಲಿ ಮಹಿಳೆಯರು ಶೇ 74.03ರಷ್ಟು ಹಾಗೂ ಪುರುಷರು ಶೇ 64.1 ಮತದಾನ ಮಾಡಿದ್ದಾರೆ.

ಒಟ್ಟಾರೆಯಾಗಿ ಶೇ 71.6ರಷ್ಟು ಮಹಿಳೆಯರು ಹಾಗೂ ಶೇ 62.8ರಷ್ಟು ಪುರುಷರು ಮತದಾನದ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2015ರಲ್ಲಿ ಬಿಹಾರದಲ್ಲಿ ಶೇ 60.48ರಷ್ಟು ಮಹಿಳೆಯರು ಹಾಗೂ ಶೇ 53.32ರಷ್ಟು ಪುರುಷರು ಮತ ಚಲಾಯಿಸಿದ್ದರು.

2000ರ ವಿಧಾನಸಭಾ ಚುನಾವಣೆಯಲ್ಲಿ ಪುರುಷರ ಮತದಾನದ ಪ್ರಮಾಣ ಶೇ 70.71 ಹಾಗೂ ಮಹಿಳೆಯರ ಮತದಾನ ಶೇ 53.28ರಷ್ಟಿತ್ತು.

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನವೆಂಬರ್ 14ರಂದು ಪ್ರಕಟಗೊಳ್ಳಲಿದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎನ್ಡಿಎಗೆ ಬಹುಮತ ನೀಡಿವೆ.
.Bihar Exit Poll: ಎನ್ಡಿಎಗೆ ಬಹುಮತ ಎಂದ ಹಲವು ಮತಗಟ್ಟೆ ಸಮೀಕ್ಷೆಗಳು.Bihar Exit Poll: ಎನ್ಡಿಎಗೆ ಅಧಿಕಾರ; 'ಇಂಡಿಯಾ' ಕೂಟ ಬಹುಮತದಿಂದ ದೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.