ಪಟ್ನಾ: ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾದರೆ ಎನ್‌ಡಿಎ ಮೈತ್ರಿಕೂಟ ತೊರೆಯುವುದಾಗಿ ಎಲ್‌ಜೆಪಿ (ರಾಷ್ಟ್ರೀಯ ಲೋಕದಳ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಮತ ವಿಭಜಕ ಎಂಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ನಾನು ಮತ ವಿಭಜಕನಾದರೆ 2014ರಲ್ಲಿ ಅವರು (ಬಿಜೆಪಿ ನಾಯಕರು) ನಮ್ಮ ಜತೆ ಮೈತ್ರಿ ಮಾಡಿಕೊಂಡಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ನಿತೀಶ್ ಕುಮಾರ್ ಅವರ ಪ್ರಚೋದನೆಯಿಂದ ಕೂಡಿದಂಥದ್ದು. ಇಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರಿಂದ ನಿರೀಕ್ಷಿಸಿರಲಿಲ್ಲ. ಇಂಥ ಹೇಳಿಕೆ ನೀಡುವ ವೇಳೆ ಅವರು ಸಂಯಮ ವಹಿಸಬೇಕಿತ್ತು. ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ತಿರಸ್ಕರಿಸಬೇಕಿದೆ. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ ನಾನು ಎನ್‌ಡಿಎ ತ್ಯಜಿಸುತ್ತೇನೆ’ ಎಂದು ಚಿರಾಗ್ ಹೇಳಿದ್ದಾರೆ.

ಇದನ್ನೂ ಓದಿ:ನಾನು ಮೋದಿಯ ಹನುಮ ಎಂದ ಚಿರಾಗ್; ‘ಮತವಿಭಜಕ’ ಎಂದು ದೂರ ತಳ್ಳಿದ ಬಿಜೆಪಿ

ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ ಬಿಹಾರ ಚುನಾವಣೆಯಲ್ಲಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ಹೆಚ್ಚಿನವರನ್ನು ಜೆಡಿ(ಯು) ಅಭ್ಯರ್ಥಿಗಳ ವಿರುದ್ಧವೇ ಕಣಕ್ಕಿಳಿಸಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರು ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರ ಹನುಮನಂತೆ ಇದ್ದೇನೆ’ ಎಂದೂ ಅವರು ಪುನರುಚ್ಚರಿಸಿದ್ದಾರೆ.

ನಿತೀಶ್ ಅವರನ್ನು ಸೋಲಿಸುವುದು ಮತ್ತು ಎಲ್‌ಜೆಪಿ ಬೆಂಬಲಿತ ಬಿಜೆಪಿ ಸರ್ಕಾರ ರಚಿಸುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಎಲ್‌ಜೆಪಿ ಟಿಕೆಟ್‌ನಿಂದ ಕಣಕ್ಕಿಳಿದಿರುವ 9 ಹಿರಿಯ ನಾಯಕರನ್ನು ಬಿಜೆಪಿ ಅಮಾನತುಗೊಳಿಸಿದೆ.

‘ಪ್ರಧಾನಿ ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರ ಹನುಮನಂತೆ ಇದ್ದೇನೆ. ವಿಮರ್ಶೆ ಮಾಡಬಯಸುವವರು ಬೇಕಿದ್ದರೆ ನನ್ನ ಹೃದಯವನ್ನು ತೆರೆದು ನೋಡಬಹುದು. ನಾನು ಪ್ರಧಾನ ಮಂತ್ರಿಯ ಭಾಯಾಚಿತ್ರವನ್ನು ಚುನಾವಣೆಯಲ್ಲಿ ಬಳಸಬೇಕಾಗಿಲ್ಲ’ ಎಂದು ಚಿರಾಗ್ ಶುಕ್ರವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ಜಾವಡೇಕರ್, ‘ತಮ್ಮ ರಾಜಕೀಯ ಸಮೀಕರಣವನ್ನು ಬಿಜೆಪಿಯ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತಾ, ವಿನಾಕಾರಣ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸುತ್ತಿರುವ ಎಲ್‌ಜೆಪಿ ನಾಯಕ ಚಿರಾಗ್ ಒಬ್ಬ ಮತ ವಿಭಜಕ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.