ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಎನ್ಕೌಂಟರ್ಗಳಲ್ಲಿ ಐವರು ನಕ್ಸಲರು ಮೃತಪಟ್ಟಿದ್ದಾರೆ.

ನಕ್ಸಲ್ ಸಂಘಟನೆಯ ಉನ್ನತ ನಾಯಕರಾದ ತೆಲಂಗಾಣ ರಾಜ್ಯ ಸಮಿತಿಯ ವಿಶೇಷ ವಲಯ ಸಮಿತಿ ಸದಸ್ಯ ಭಾಸ್ಕರ್ ಹಾಗೂ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ನರಸಿಂಹ ಚಲಂ ಅಲಿಯಾಸ್ ಸುಧಾಕರ್ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಾಸ್ಕರ್ ಸುಳಿವು ನೀಡಿದವರಿಗೆ ₹45 ಲಕ್ಷ ಬಹುಮಾನವನ್ನು ಛತ್ತೀಸಗಢ ಹಾಗೂ ತೆಲಂಗಾಣದಲ್ಲಿ ಘೋಷಿಸಲಾಗಿತ್ತು. ಚಲಂ ಸುಳಿವು ನೀಡಿದವರಿಗೆ ಛತ್ತೀಸಗಢ ಸರ್ಕಾರ ₹40 ಲಕ್ಷ ಬಹುಮಾನವನ್ನು ಘೋಷಿಸಿತ್ತು.

ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಜೂನ್ 4ರಿಂದ ಕಾರ್ಯಾಚರಣೆ ನಡೆದಿದೆ. ಎರಡು ಎಕೆ–47 ರೈಫಲ್ಗಳು ಸೇರಿದಂತೆ ಅಪಾರ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೃತಪಟ್ಟ ನಕ್ಸಲರಲ್ಲಿ ಇಬ್ಬರು ಮಹಿಳೆಯರ ಶವ ದೊರೆತಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಭದ್ರತಾ ಸಿಬ್ಬಂದಿಗಳು ಸಹ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
.ಮಾಜಿ ನಕ್ಸಲ್ರ ಮನದಾಳದ ಮಾತುಗಳು....ಶಸ್ತ್ರಾಸ್ತ್ರಗಳಿಂದ ಬದಲಾವಣೆ ಅಸಾಧ್ಯ: ನಕ್ಸಲ್ ಹಿಂಸಾಚಾರದ ಕುರಿತು ಶಾ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.