ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...

Published 25 ನವೆಂಬರ್ 2023, 15:29 IST
Last Updated 25 ನವೆಂಬರ್ 2023, 15:29 IST
ಅಕ್ಷರ ಗಾತ್ರ

* ‘ಮೋದಿ ಘೋಷಣೆಗೆ ಕ್ರಮ ಇಲ್ಲ’: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ ಬಜರಂಗ ಬಲಿ’ ಎಂದು ಘೋಷಣೆ ಕೂಗಿದ್ದರು. ಈ ಕುರಿತು ಮೌನ ಕಾಯ್ದುಕೊಂಡಿದ್ದ ಚುನಾವಣಾ ಆಯೋಗವು ವಿರೋಧಪಕ್ಷಗಳ ಹೇಳಿಕೆ ಕುರಿತು ಕ್ರಮಕ್ಕೆ ಮುಂದಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಸಿಪಿಎಂ ಪರ ಪ್ರಚಾರ ನಡೆಸಲು ಹೈದರಾಬಾದ್‌ಗೆ ಆಗಮಿಸಿರುವ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು. ಇಲ್ಲದಿದ್ದರೆ ದೇಶದ ಜಾತ್ಯತೀತ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಿಲ್ಲ ಎಂದರು. 

* ರಾಹುಲ್ ವಿರುದ್ಧ ಕ್ರಮಕ್ಕೆ ಆಗ್ರಹ: ಮತದಾರರನ್ನು ಉದ್ದೇಶಿಸಿ ಮತದಾನದ ದಿನವೇ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಶನಿವಾರ ಪತ್ರ ಬರೆದಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಚುನಾಯಿಸುವಂತೆ ಮನವಿ ಮಾಡಿರುವ ರಾಹುಲ್‌, ‘ರಾಜ್ಯವು ಈ ಬಾರಿ ಉಚಿತ ಚಿಕಿತ್ಸೆ, ಕಡಿಮೆ ಬೆಲೆಯ ಅಡುಗೆ ಅನಿಲ ಸಿಲಿಂಡರ್‌, ಜಾತಿ ಗಣತಿಯನ್ನು ಆಯ್ದುಕೊಳ್ಳುತ್ತದೆ’ ಎಂದು ಪೋಸ್ಟ್‌ ಮಾಡಿದ್ದರು.

‘ನಿಮ್ಮ ಪ್ರತಿ ಮತವನ್ನು ಸುಂದರ ಭವಿಷ್ಯಕ್ಕಾಗಿ, ಹಕ್ಕುಗಳಿಗಾಗಿ, ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳಿಗಾಗಿ ನೀಡಿ’ ಎಂದು ಪ್ರಿಯಾಂಕಾ ಪೋಸ್ಟ್‌ ಮಾಡಿದ್ದಾರೆ.

* ‘ಕಾಂಗ್ರೆಸ್‌ನಿಂದ ಬಿಜೆಪಿಯ ಟೈರ್‌ ಪಂಕ್ಚರ್‌’: ತೆಲಂಗಾಣದಲ್ಲಿ ಬಿಜೆಪಿಯ ಎಲ್ಲಾ ನಾಲ್ಕು ಟೈರ್‌ಗಳನ್ನು ಪಂಕ್ಚರ್‌ ಮಾಡಲಾಗಿದೆ. ದೆಹಲಿಯಲ್ಲೂ ಶೀಘ್ರವೇ ಇದನ್ನು ಪಕ್ಷವು ಮಾಡಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ತೆಲಂಗಾಣದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ತಾವು ಓದಿದ ಶಾಲೆ ಮತ್ತು ವಿಶ್ವವಿದ್ಯಾಲಯಗಳು, ತಮ್ಮ ವಿಮಾನಗಳು ಟೇಕ್‌ ಆಫ್‌ ಆಗುವ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದು ಕಾಂಗ್ರೆಸ್‌ ಎಂಬುದನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ಅವರು ಅರಿತುಕೊಳ್ಳಬೇಕು ಎಂದರು. ಈ ಬಾರಿಯ ಚುನಾವಣೆಯನ್ನು ‘ಊಳಿಗಮಾನ್ಯ ಸರ್ಕಾರ ಮತ್ತು ಪ್ರಜಾ ಸರ್ಕಾರದ ನಡುವಿನ ಯುದ್ಧ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT