ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್‌ ಪವಾರ್‌ ರಾಜಕೀಯ ಜೀವನ ಅಂತ್ಯಗೊಳಿಸಲು ಅಜಿತ್‌ಗೆ ಬಿಜೆಪಿ ಸುಪಾರಿ: ದೇಶಮುಖ್‌

Published 1 ಡಿಸೆಂಬರ್ 2023, 10:08 IST
Last Updated 1 ಡಿಸೆಂಬರ್ 2023, 10:08 IST
ಅಕ್ಷರ ಗಾತ್ರ

ವಾರ್ಧಾ (ಮುಂಬೈ): ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಅವರ ರಾಜಕೀಯ ಜೀವನವನ್ನು ಕೊನೆಗೊಳಿಸಲು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಬಿಜೆಪಿ ಸುಪಾರಿ ನೀಡಿದೆ ಎಂದು ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇಶಮುಖ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್‌ನಲ್ಲಿ ಭಾಷಣ ಮಾಡಿದ ನಂತರ, ಅಜಿತ್ ಪವಾರ್‌ ಮತ್ತು ಅವರ ಬೆಂಬಲಿಗರು ಅವಸರದಲ್ಲಿ ಬಿಜೆಪಿ ಸರ್ಕಾರವನ್ನು ಸೇರಿಕೊಂಡರು ಎಂಬುದು ಇಡೀ ಮಹಾರಾಷ್ಟ್ರಕ್ಕೆ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಎನ್‌ಸಿಪಿಯು ವಿಭಜನೆಯಾಗುವ ಕೆಲವು ದಿನಗಳ ಮೊದಲು, ಪಕ್ಷವು ಸುಮಾರು ₹70,000 ಕೋಟಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಶರದ್‌ ಪವಾರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಬಿಜೆಪಿಯು ಅಜಿತ್‌ ಪವಾರ್‌ ಅವರಿಗೆ ‘ಸುಪಾರಿ’ ನೀಡಿದೆ ಎಂದು ದೇಶಮುಖ್‌ ತಿಳಿಸಿದ್ದಾರೆ.

ಜುಲೈನಲ್ಲಿ ಮಹಾರಾಷ್ಟ್ರದ ಅಜಿತ್‌ ಪವಾರ್‌ ಮತ್ತು ಇತರ ಎಂಟು ಶಾಸಕರು ಬಿಜೆಪಿ ಮತ್ತು ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸರ್ಕಾರವನ್ನು ಸೇರಿದ ನಂತರ ಎನ್‌ಸಿಪಿ ವಿಭಜನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT