ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಸ್ಥಿತಿಯನ್ನು ಪಾಕ್‌ಗಿಂತ ಕೀಳಾಗಿಸಲು ಬಿಜೆಪಿ ಸಂಕಲ್ಪ: ಹೇಮಂತ್‌ ಸೊರೇನ್‌

Published : 2 ಆಗಸ್ಟ್ 2024, 16:11 IST
Last Updated : 2 ಆಗಸ್ಟ್ 2024, 16:11 IST
ಫಾಲೋ ಮಾಡಿ
Comments

ರಾಂಚಿ: ಭಾರತದ ಸ್ಥಿತಿಯನ್ನು ನೆರೆಯ ಪಾಕಿಸ್ತಾನಕ್ಕಿಂತ ಕೆಳಮಟ್ಟಕ್ಕಿಳಿಸಲು ಬಿಜೆಪಿಯು ದೃಢ ಸಂಕಲ್ಪ ಮಾಡಿದಂತಿದೆ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಕಿಡಿಕಾರಿದ್ದಾರೆ. 

ಮುಂಗಾರು ಅಧಿವೇಶನದ ಸಮಾರೋಪ ದಿನದಂದು ಸದನದಲ್ಲಿ ಮಾತನಾಡಿದ ಸೊರೇನ್‌ ಅವರು ‘ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡಿಸಿ ‘ವೋಟ್‌ ಬ್ಯಾಂಕ್‌ ರಾಜಕಾರಣ’ ಮಾಡುತ್ತಿದೆ. ದೇಶವು ಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ತಪ್ಪು ನೀತಿಗಳಿಂದ ಭಾರತದ ಆರ್ಥಿಕತೆಯನ್ನು ನಾಶ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

ಅಲ್ಲದೇ ಧರ್ಮಗಳ ಆಧಾರದಲ್ಲಿ ದೇಶವನ್ನು ಒಡೆಯುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯ ಜನರು ಸರಿಯಾದ ಉತ್ತರ ನೀಡಿದ್ದಾರೆ. ರೈತರು ಅಪಾಯದಲ್ಲಿದ್ದರೆ, ಸರ್ಕಾರವು ‌ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT