ಮುಂಬೈ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮುಂಬೈನಲ್ಲಿ ಹಿಂದಿ ಭಾಷಿಕರ ವಿರುದ್ಧ ನಡೆದ ಹಲ್ಲೆಯನ್ನು ಖಂಡಿಸುತ್ತಾ, ‘ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ (ಪಟಕ್ ಪಟಕ್ ಕೆ ಮಾರೇಂಗೆ) ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ದುಬೆ ಅವರು, ‘ನೀವು ನಮ್ಮ ಹಣದಲ್ಲಿ ಬದುಕುತ್ತಿದ್ದೀರಿ. ನಿಮ್ಮ ಬಳಿ ಯಾವ ಕೈಗಾರಿಕೆಗಳಿವೆ? ಟಾಟಾ, ಬಿರ್ಲಾ, ಅಂಬಾನಿಯವರು ಇಲ್ಲಿ ಉದ್ಯಮ ನಡೆಸುತ್ತಿದ್ದಾರೆ. ನೀವು ಹಿಂದಿ ಭಾಷಿಕರನ್ನು ಹೊಡೆಯುವಷ್ಟು ದೊಡ್ಡವರಾಗಿದ್ದರೆ, ಉರ್ದು, ತಮಿಳು ಮತ್ತು ತೆಲುಗು ಭಾಷಿಕರನ್ನೂ ಹೊಡೆಯುವ ಧೈರ್ಯ ನಿಮಗಿರಬೇಕು. ನೀವು ಅಷ್ಟೊಂದು ‘ದೊಡ್ಡ ಜನ’ರಾಗಿದ್ದರೆ ಮಹಾರಾಷ್ಟ್ರದಿಂದ ಹೊರಗೆ ಬಿಹಾರ, ಉತ್ತರ ಪ್ರದೇಶ ಅಥವಾ ತಮಿಳುನಾಡಿಗೆ ಬನ್ನಿ. ನಾವು ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ ಎಂದಿದ್ದಾರೆ.

ಇಂಥ ಹೇಳಿಕೆ ಸರಿಯಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್, ‘ದುಬೆ ಅವರು ಒಂದು ಸಂಘಟನೆ ಬಗ್ಗೆ ಈ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಮರಾಠಿ ಜನರಿಗೆ ಹೇಳಿದ್ದಲ್ಲ. ಆದರೆ ಇಂಥ ಹೇಳಿಕೆ ನೀಡುವುದು ಸರಿಯಲ್ಲ. ಈ ಮಾತುಗಳು ಜನರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.