ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷ ರಾಜಕೀಯ ಕಾರ್ಯತಂತ್ರ ರೂಪಿಸಿದ್ದು, ಇದರ ಭಾಗವಾಗಿಯೇ 'ಬಹಾನೆ ನಹಿ ಬದ್ಲಾವ್ ಚಾಹಿಯೇ' ಎಂಬ ಪ್ರಚಾರ ಗೀತೆಯ ಮೂಲಕ ‘ದೆಹಲಿಗೆ ಬಿಜೆಪಿ ಸರ್ಕಾರ ಅವಶ್ಯಕವಾಗಿದೆ' ಎಂದು ಚುನಾವಣಾ ಪ್ರಚಾರ ಆರಂಭಿಸಿದೆ.

ಕಳೆದ ವಾರ ರೋಹಿಣಿ ಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬಹಾನೆ ನಹಿ ಬದ್ಲಾವ್ ಚಾಹಿಯೇ, ದೆಹಲಿ ಮೇ ಬಿಜೆಪಿ ಸರ್ಕಾರ್ ಚಾಹಿಯೇ‘( ಸಬೂಬು ಅಲ್ಲ ಬದಲಾವಣೆ ಬೇಕು, ದೆಹಲಿಗೆ ಬಿಜೆಪಿ ಸರ್ಕಾರ ಬೇಕು) ಎಂಬ ಹಾಡನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
.ಮ.ಪ್ರದೇಶ: ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.PM ಮೋದಿ ಕುರಿತು ಮಹಾಕಾವ್ಯ ‘ನರೇಂದ್ರ ಆರೋಹಣಂ’ ರಚಿಸಿದ ಒಡಿಯಾ ಸಂಸ್ಕೃತ ವಿದ್ವಾಂಸ.
'ಬಿಜೆಪಿ ಪಕ್ಷವು ಇದೇ ಪ್ರಚಾರದ ಗೀತೆಯ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದೆ. ‘ಸುಳ್ಳು ಭರವಸೆಗಳಿಂದ ಜನರಿಗೆ 'ಮೋಸ' ಮಾಡಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಎಎಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂಬ ಸಾರಾಂಶ ಈ ಪ್ರಚಾರ ಗೀತೆ ಒಳಗೊಂಡಿದೆ. ಇದು ದೆಹಲಿ ಜನರ ಮನಸ್ಥಿತಿಯೂ ಆಗಿದೆ' ಎಂದು ದೆಹಲಿ ಬಿಜೆಪಿ ನಾಯಕ ವೀರೇಂದ್ರ ಸಚ್ದೇವ ತಿಳಿಸಿದ್ದಾರೆ.

ಬಿಜೆಪಿ ಸಂಸದ, ಗಾಯಕ ತಿವಾರಿ ಅವರು ಚುನಾವಣಾ ಪ್ರಚಾರದ ಗೀತೆಯ ಸಾಲುಗಳನ್ನು ಹಾಡಿದ್ದಾರೆ. ಬಳಿಕ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನರ ಭಾವನೆಗಳಿಗೆ ಸ್ಪಂದಿಸುವ ಸಮಯ ಇದಾಗಿದೆ. ಎಎಪಿಗೆ ಈ ಬಾರಿ ತಕ್ಕ ಉತ್ತರ ಸಿಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಎಎಪಿ ಚುನಾವಣೆಗೆ 'ಫಿರ್ ಲಾಯೇಂಗೆ ಕೇಜ್ರಿವಾಲ್' ಪ್ರಚಾರ ಗೀತೆಯನ್ನು ಬಿಡುಗಡೆಗೊಳಿಸಿತ್ತು.

ಫೆಬ್ರುವರಿ 5 ರಂದು ನಡೆಯಲಿರುವ 70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಚುನಾವಣೆಗೆ ಬಿಜೆಪಿ ಇದುವರೆಗೆ 29 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲಾ 70 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
.ಬೆಳಗಾವಿ | ಗಾಂಜಾ ಸೇವನೆಗೆ ಸಹೋದರರ ಜಗಳ: ತಮ್ಮ ಸಾವು, ಅಣ್ಣ ಗಂಭೀರ.ದೇವದತ್ತ ಪಡಿಕ್ಕಲ್ ಅಮೋಘ ಶತಕ; ಬರೋಡಾ ಗೆಲುವಿಗೆ 282 ರನ್ ಗುರಿ ಒಡ್ಡಿದ ಕರ್ನಾಟಕ.ರಾಷ್ಟ್ರದ ಹಿತ ಚಿಂತನೆಗೆ ಸಾಹಿತ್ಯ ಉತ್ಸವ ಪ್ರೇರಣೆಯಾಗಲಿ: ಎಸ್.ಎಲ್.ಭೈರಪ್ಪ .ಉತ್ತರ ಪ್ರದೇಶ: ಹನುಮಾನ್ ವಿಗ್ರಹ ಧ್ವಂಸ ಮಾಡಿದ ಕಿಡಿಗೇಡಿಗಳು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.