ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ನಿಂದ ಹವಾಲ ಹಣ ತಂದವರಿಗೆ ಬಿಜೆಪಿ ಬೆಂಬಲ: ಮೆಹಬೂಬಾ

Published 22 ಮೇ 2024, 15:36 IST
Last Updated 22 ಮೇ 2024, 15:36 IST
ಅಕ್ಷರ ಗಾತ್ರ

ಪೂಂಛ್‌/ಜಮ್ಮು: ಅಪ್ನಿ ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ ವಿರುದ್ಧ ಬುಧವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸಿನ ನೆರವು ನೀಡಲು ಪಾಕಿಸ್ತಾನದಿಂದ ಹವಾಲ ಹಣ ತಂದಿದ್ದ ಪಕ್ಷಕ್ಕೆ ಬಿಜೆಪಿ ಬೆಂಬಲ ನೀಡುತ್ತಿದೆ’ಎಂದು ಆರೋಪಿಸಿದರು.

ಬುಖಾರಿ ಅವರನ್ನು 2019ರಲ್ಲಿ ಪಿಡಿಪಿಯಿಂದ ಉಚ್ಚಾಟಿಸಲಾಗಿತ್ತು. ಅವರ ಅಪ್ನಿ ಪಕ್ಷವು ಅನಂತನಾಗ್‌–ರಜೌರಿ ಲೋಕಸಭಾ ಕ್ಷೇತ್ರದಿಂದ ಮೆಹಬೂಬಾ ಹಾಗೂ ನ್ಯಾನಲ್‌ ಕಾನ್ಫರೆನ್ಸ್‌ ಮುಖಂಡ ಮಿಯಾನ್‌ ಅಲ್ತಾಫ್‌ ಅವರ ವಿರುದ್ಧ ಜಾಫರ್ ಇಕ್ಬಾಲ್ ಖಾನ್ ಮನ್ಹಾಸ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ. 

‘ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಈಚೆಗೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಸಬೇಕು. ಭಯೋತ್ಪಾದಕರಿಗೆ ನೆರವಾಗಲು ಪಾಕಿಸ್ತಾನದಿಂದ ಹವಾಲ ಹಣ ತಂದಿರುವ ಪ್ರಕರಣದಲ್ಲಿ ಪಕ್ಷವೊಂದರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಮೆಹಬೂಬಾ ಆಗ್ರಹಿಸಿದರು.

‘ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಅದನ್ನು ನೀವು ಪತ್ತೆ ಹಚ್ಚಿಕೊಳ್ಳಿ’ ಎಂದೂ ಹೇಳಿದ್ದಾರೆ.

‘ತಾವು ರಾಷ್ಟ್ರೀಯವಾದಿಗಳು ಎನ್ನುತ್ತಿರುವ ಬಿಜೆಪಿಯವರು, ಹವಾಲ ಹಣ ತಂದಿರುವ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಅಚ್ಚರಿಯುಂಟುಮಾಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT